ಮಡಿಕೇರಿ ಅ.3 :  ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ರಾಜ್ಯ ಮಟ್ಟದ ಮೈಸೂರು ಡಿವಿಷನ್ ಸಿಎಂ ಕಪ್ ಫುಟ್ಬಾಲ್ ಲೀಗ್ ನಲ್ಲಿ ಕೊಡಗಿನ ಎಫ್ಎಂಸಿ ಕಾಲೇಜು ತಂಡ ಜಯಶಾಲಿಯಾಗುವ ಮೂಲಕ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. 1984 ರ ಬಳಿಕ ಇದೇ ಮೊದಲಬಾರಿಗೆ ಕೊಡಗು ತಂಡ ಮೈಸೂರು ಡಿವಿಷನ್ ಫುಟ್ಬಾಲ್ ಲೀಗ್ ನ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಜಿಲ್ಲಾ ಮಟ್ಟದ ಪಂದ್ಯಾಟವನ್ನು ಗೆಲ್ಲುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಎಫ್ಎಂಸಿ ತಂಡ ಮೈಸೂರು ಡಿವಿಷನ್ ಲೀಗ್ ನಲ್ಲಿ ಬೆಂಗಳೂರು ನಗರ ವಿರುದ್ಧ 2-0, ಬೆಳಗಾಂ ವಿರುದ್ಧ 1-0, ಬೀದರ್ ವಿರುದ್ಧ 3-0 ಹಾಗೂ ಬೆಂಗಳೂರು ಗ್ರಾಮಾಂತರ ವಿರುದ್ಧ 1-2 ಗೋಲುಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಜ್ಯ ದಸರಾ ಅಂಗವಾಗಿ ನಡೆದ ಸಿಎಂ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಎಫ್ ಎಂ ಸಿ ತಂಡಕ್ಕೆ ಮೋಹನ್ ಹಾಗೂ ನಿತಿನ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದರು

.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ