ಮೈಸೂರು ದಸರಾ ಎಷ್ಟೊಂದು ಸುಂದರ, ನೋಡಲು ಎರಡು ಕಣ್ಣು ಸಾಲದು. ಈ ಬಾರಿ ದಸರಾವನ್ನು ಬಹಳ ವಿಜೃಭಣೆಯಿಂದ ಆಚರಿಸಲಾಗಿದ್ದು, ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ. 750 ಕೆ.ಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ಅಭಿಮನ್ಯು ಬನ್ನಿ ಮಂಟಪದತ್ತ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ. ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತೊಮ್ಮೆ ರಾಜ ವೈಭೋಗಕ್ಕೆ ಸಾಕ್ಷಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಂಜೆ 5.40ಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ರಾಜ ಯವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಮೈಸೂರು ಪಾಲಿಕೆ ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಪೊಲೀಸ್ ಆಯುಕ್ತ ಚಂದ್ರಗುಪ್ತ ಉಪಸ್ಥಿತರಿದ್ದರು. ಅಭಿಮನ್ಯು ಈಗಾಗಲೇ 2 ಬಾರಿ ಅಂಬಾರಿಯನ್ನು ಹೊತ್ತಿದ್ದು, ಮೂರನೇ ಬಾರಿಗೆ ಹೊತ್ತಿದ್ದಾನೆ. ಅಭಿಮನ್ಯುವಿನೊಂದಿಗೆ ಅರ್ಜುನ ನಿಶಾನೆ ಆನೆ , ಚೈತ್ರ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಜಂಬೂ ಸವಾರಿಯಲ್ಲಿ ಸಾಗಲಿವೆ. ಟೋಟಲಿ 9 ಆನೆಗಳು ರಾಜ ಬೀದಿಗಳಲ್ಲಿ ಸಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಸ್ತಬ್ಧ ಚಿತ್ರ ಪ್ರದರ್ಶನ ನಡೆಯಿತು. ನೆಲದ ಸಂಸ್ಕೃತಿಯನ್ನು ಬಿಂಬಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸ್ತಬ್ಧ ಚಿತ್ರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಕಂಬಳ, ಹುಲಿ ಕುಣಿತ, ಭೂತಾರಾಧನೆಯ್ನು ಬಿಂಬಿಸುವ ಸ್ತಬ್ಧ ಗಮನ ಸೆಳೆಯಿತು.
ಸ್ತಬ್ದ ಚಿತ್ರಗಳ ವಿವರ:
- 1.ಬಾಗಲಕೋಟೆ -ಮುಧೋಳ ಶ್ವಾನ, ಇಳಕೆಲ್ ಸೀರೆ, ದುರ್ಗಾಂಬ ದೇವಸ್ಥಾನ
2.ಬಳ್ಳಾರಿ-ದುರ್ಗಾಂಬ ದೇವಾಸ್ಥಾನ, ಮಿಂಜೇರಿ ಗುಡ್ಡ, ಬಳ್ಳಾರಿ ಕೋಟೆ
3.ಬೆಳಗಾವಿ-ಶೀ ರೇಣುಕಾದೇವಿ ದೇವಾಸ್ಥಾನ, ಕಮಲ ಬಸದಿ
4.ಬೆಂಗಳೂರು(ಗಾ)- ಮನ್ಯಾಪುರ ದೇವಸ್ಥಾನ,, ಕಪಿಲೇಶ್ಷರ ದೇವಸ್ಥಾನ, ಜೈನಬಸದಿ, ಸಿಂಪಾಡಿಪುರ ವೀಣೆ
5.ಬೆಂಗಳೂರು ನಗರ -ಕಡಲೆಕಾಯಿ ಪರಸೆ, ಬಸವನ ಗುಡಿ
6.ಬೀದರ್-ನೂತನ ಅನುಭವ ಮಂಟಪ
7.ಚಾಮರಾಜನಗರ -ವನ್ಯಧಾಮ, ಶ್ರೀಮಹದೇಶ್ವೇರ ವಿಗ್ರಹ, ಪುನೀತ್ ರಾಜಕುಮಾರ್ ಪ್ರತಿಮೆ
8.ಚಿಕ್ಕಬಳ್ಳಾಪುರ -ಗ್ರೀನ್ ನಂದಿ & ಕ್ಲೀನ್ ನಂದಿ, ಭೋಗೇಶ್ವರ ದೇವಸ್ಥಾನ - ಚಿಕ್ಕಮಗಳೂರು- ದ್ವಾದಶ ಜಿಲ್ಲೆಗಳಿಗೆ ಜೀವನಾಡಿ ಚಿಕ್ಕಮಗಳೂರು ಜಿಲ್ಲೆಯು ಸಪ್ತ ನದಿಗಳ ತವರು
10.ಚಿತದುರ್ಗ-ವಾಣಿವಿಲಾಸ ಜಲಾಶಯ, ಓನಕೆ ಓಬ್ಬವ, ಕುದುರೆ ಮೇಲೆ ಅಸನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ತಂಭ
11.ದಕ್ಪಿಣ ಕನ್ನಡ-ಕಂಬಳ, ಹುಲಿವೇಶ,ಭೂತ ಕೋಲ
12.ದಾವಣಗೆರೆ-ಸಂತೆ ಬೆನ್ನೂರು ಪುಷ್ಕರಣಿ
13.ಧಾರವಾಡ-ಸಂಗೀತ ದಿಗ್ಗಜರು
14.ಗದಗ-ಶ್ರೀ ಕ್ಷೇತ್ರ ಶ್ರೀಮಂತಗಡ, ಹೊಳಲಮ್ಮ ದೇವಿ ಮತ್ತು ಶಿವಾಜಿ
15.ಹಾಸನ-ಬೇಲೂರು ಚೆನ್ನಕೇಶವ ದೇವಸ್ಥಾನ, ಶ್ರವಣಬೆಳಗೊಳ- ಗೊಮ್ಮಟೇಶ್ವರ
16.ಹಾವೇರಿ-ಗುರು ಗೋವಿಂದಭಟ್ರು, ಸಂತೆ ಶಿಶುನಾಳ ಷರೀಫರು, ಮುಕ್ತೇಶ್ವರ ದೇವಾಲಯ
17.ಕಲಬುರಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ, ವನ್ಯಜೀವಿ ಧಾಮ
18.ಕೊಡಗು-ಬ್ರಹ್ಮಗಿರಿ ಬೆಟ್ಟ, ಬೃಗೇಂಡಶ್ವೇರ ದೇವಸ್ಥಾನ, ತಲಕಾವೇರಿ ತೀರ್ಥೋಬವ, ಇರ್ಪು ಜಲಾಶಯ
19. ಕೋಲಾರ-ಬಿಕೆಎಸ್ ಅಯ್ಯಂಗಾರ್ ಯೋಗನಾಥ್ ಹಾಗೂ ಅಂತರಗಂಗೆ ಬೆಟ್ಟ
- ಕೊಪ್ಪಳ-ಆನೆಗುಂದಿ ಬೆಟ್ಟ,ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ
- ಮಂಡ್ಯ-ಮಂಡ್ಯಜಿಲ್ಲೆಯ ದೇಗುಲಗಳು
- ಮೈಸೂರು-ಮೈಸೂರು ಜಿಲ್ಲೆ ವಿಶೇಷತೆಗಳು
- ರಾಯಚೂರು-ಸಿರಿಧಾನ್ಯ ಬೆಳೆಗಳ ಅಭಿಯಾನ
- ರಾಮನಗರ-ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ
- ಶಿವಮೊಗ್ಗ-ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ
- ತುಮಕೂರು-ನಿಟ್ಟೂರಿನ ಹೆಚ್‌ಎಎಲ್ ತಯಾರಿಕ ಘಟಕ, ಪಾವಗಡದ ವಿಶ್ವದ ಮೊದಲ ಬೃಹತ್ ಸೋಲಾರ್ ಪಾರ್ಕ್
- ಉಡುಪಿ-ಜಿಐ ಟ್ಯಾಗ್ ಹೊಂದಿರುವ ಉಡುಪಿ ಕೈಮಗ್ಗ, ಸೀರೆ ನೇಯ್ಗೆ ,ಸಂಪ್ರಾದಾಯಕ ಕಲಾ ಪ್ರದರ್ಶನ
- ಉತ್ತರ ಕನ್ನಡ-ಕಾರವಾರ ನೌಕನೆಲೆ,(ಐಎನ್‌ಎಸ್ ವಿಕ್ರಮ್)
- ವಿಜಯಪುರ-ಸಿದ್ದರಾಮೇಶ್ವರ ದೇವಸ್ಥಾನ,
- ವಿಜಯನಗರ-ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ 31. ಯಾದಗಿರಿ-ಸುರಪುರ ಕೋಟೆ