ಫ್ರೆಂಡ್ಸ್ ಪೇರಾಲು ತಂಡ ಅಕ್ಟೋಬರ್ 2 ರಂದು ಪೇರಾಲು ಶಾಲೆಯಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿತಾಯವಾದ ₹.40 ಸಾವಿರ ಹಣವನ್ನು ಇಬ್ಬರು ಮಕ್ಕಳ ಚಿಕಿತ್ಸೆಗೆ ನೀಡಲು ಆಯೋಜಕರು ನಿರ್ಧರಿಸಿದ್ದಾರೆ. ಗುತ್ತಿಗಾರಿನ ಸಮೀಕ್ಷಾ ಎಂಬ ಬಾಲಕಿ ಕ್ಯಾನ್ಸರ್ ಕಾಯಿಲೆಯಿಂದ ಹಾಗೂ ಬೀರಮಂಗಲದ ಹಾರ್ದಿಕ್ ಎಂಬ ಬಾಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಹಣದ ನೀಡಿದ್ದಾರೆ.

ಮಕ್ಕಳ ಚಿಕಿತ್ಸೆಗೆ ಹಣ ನೀಡಲು ನಿರ್ಧರಿಸಿದ ಪೇರಾಲಿನ ಯುವಕರ ತಂಡ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ ಅದರಲ್ಲಿ ಬರುವ ಲಾಭದ ಹಣವನ್ನು ಈ ಎರಡು ಪುಟಾಣಿಗಳಿಗಾಗಿ ನೀಡಲು ನಿರ್ಧರಿದರು. ಅದರಂತೆ ಅ.2 ರಂದು ಪಂದ್ಯಾಟ ನಡೆಸಿದರು. ಈ ಪಂದ್ಯಾಟದಲ್ಲಿ ಒಟ್ಟು 38 ತಂಡಗಳು ಭಾಗವಹಿಸಿತ್ತು. ಒಂದು ತಂಡದ ನೋಂದಣಿ ಶುಲ್ಕ ₹800 ಪಡೆದುಕೊಂಡಿದ್ದರು. ಪಂದ್ಯಾಟ ಮುಗಿದು ಬಹುಮಾನ ವಿತರಣೆಯಾದ ಬಳಿಕ ಉಳಿಕೆ ಹಣ ಎಣಿಸಿದಾಗ ರೂ.40 ಸಾವಿರ ಸಂಗ್ರಹವಾಗಿತ್ತು. ಈ ಹಣವನ್ನು ಸಮೀಕ್ಷಾ ಹಾಗೂ ಹಾರ್ದಿಕ್ ಗೆ ತಲಾ 20 ಸಾವಿರ ದಂತೆ ನೀಡಲು ನಿರ್ಧಾರಕೈಗೊಳ್ಳಲಾಯಿತು. ಅ.6 ರಂದು ಪೇರಾಲು ಫ್ರೆಂಡ್ಸ್ ತಂಡ ಹಾರ್ದಿಕ್ ನ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ನೀಡಲಾಗಿದೆ ಎಂದು ಫ್ರೆಂಡ್ಸ್ ಪೇರಾಲು ತಂಡದ ಅಶ್ವಿನ್ ಪೇರಾಲು ತಿಳಿಸಿದ್ದಾರೆ. ಇವರ ಈ ನಡೆಗೆ, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.