ಮಂಗಳೂರು: ಎರಡು ದಿನದ ಹಿಂದಷ್ಟೇ ಆರಂಭಗೊಂಡ ಬೆಂಗಳೂರು-ಮಂಗಳೂರು ರೈಲು ಸೇವೆ ತಾತ್ಕಾಲಿಕವಾಗಿ ಮತ್ತೆ ರದ್ದುಗೊಳಿಸಿದೆ. ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತವಾಗಿದ ಪರಿಣಾಮ ಕೆಲ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.
ಶನಿವಾರ ಮುಂಜಾನೆ ಸಕಲೇಶಪುರ ಹಾಗೂ ಬಾಳ್ಳುಪೇಟೆ ರೈಲು ಮಾರ್ಗ ಮಧ್ಯೆ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಶುಕ್ರವಾರ(ಆಗಸ್ಟ್ 9) ದಂದು ಹೊರಟಿದ್ದ ಬೆಂಗಳೂರು-ಕಣ್ಣೂರು (ಕಣ್ಣೂರು ಎಕ್ಸ್ ಪ್ರೆಸ್) ಮತ್ತು ಬೆಂಗಳೂರು-ಮರ್ಡೇಶ್ವರ (ಮುರ್ಡೇಶ್ವರ ಎಕ್ಸ್ ಪ್ರೆಸ್) ರೈಲುಗಳು ಆಲೂರು ಹಾಗೂ ಹಾಸನದಲ್ಲಿ ಸ್ಥಗಿತಗೊಂಡಿದೆ.ಸದ್ಯ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ ರೈಲು ಇಲಾಖೆ ಟ್ವೀಟ್ ಮಾಡಿದೆ.