Advertisement
ಪರಂಗೀಪೇಟೆ: A1 ಹೆಲ್ಪಿಂಗ್ ಫೌಂಡೇಶನ್ ಹಾಗೂ ಇಂಡಿಯನ್ ಹ್ಯುಮನ್ ರೈಟ್ಸ್ ಪ್ರೊಟೆಕ್ಷನ್ ಫಾರಮ್ ಇವರ ವತಿಯಿಂದ ಪ್ರವಾದಿ ಮುಹಮ್ಮದ್ (ಸ.ಅ)ರ ಜನ್ಮ ದಿನದ ಪ್ರಯುಕ್ತ ಈದ್ ಮಿಲಾದ್ ಸೌಹಾರ್ದ ಕೂಟ ಫರಂಗಿಪೇಟೆ ಸಮೀಪ ಕಣ್ಣೂರಿನಲ್ಲಿ ನಡೆಯಿತು. ಸಂಘಟನಾ ಮುಖಂಡ ಪ್ರವೀಣ್ ಕೊಂಚಾಡಿ ಮುಖ್ಯ ಬಾಷಣ ಮಾಡಿದರು. ಕಣ್ಣೂರು ಮಸೀದಿ ಖತೀಬರಾದ ಅನ್ಸಾರ್ ಫೈಝಿ ಅವರು ಹಿಂದೂ ಬಾಂಧವರಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಇಂಡಿಯನ್ ಹ್ಯುಮನ್ ರೈಟ್ಸ್ ಪ್ರೊಟೆಕ್ಷನ್ ಫಾರಮ್ ದ.ಕ ಇದರ ಎ ಒನ್ ರಿಯಾಜ್ ಮತ್ತು ಇಕ್ಬಾಲ್ ಪರ್ಲಿಯಾ, ಸುನಿಲ್ ಕೊಡಕ್ಕಲ್, ದಿನೇಶ್ ಕಣ್ಣೂರು, ದಯಾನಂದ್, ಪ್ರವೀಣ್, ರವಿರಾಜ್ , ನಾಸೀರ್ ಸಾಮಣಿಗ, ಮೊಹಮ್ಮದ್ ಮೋನು, ಷರೀಫ್ ವಲಾಲ್, ನವೀನ್, ಎಸ್ ಡಿ ಶಾಕೀರ್ ಕಣ್ಣೂರು, ನಿಜಾರ್ ಕಣ್ಣೂರು ಉಪಸ್ಥಿತರಿದ್ದರು. ವಸಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Advertisement