ಪುತ್ತೂರು: ರೈಲಿನಡಿ ಬಿದ್ದು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಅ.16 ರಂದು ಸಂಜೆ ಮಿತ್ತೂರಿನಲ್ಲಿ ನಡೆದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಕಬಕ-ಪುತ್ತೂರು ರೈಲ್ವೆ ನಿಲ್ದಾಣಕ್ಕೆ ತರಲಾಗಿದ್ದು, ಮೃತದೇಹವು ಛಿದ್ರಗೊಂಡಿದೆ.

ನಿಧಾನವಾಗಿ ರೈಲು ಚಲಿಸುತ್ತಿದ್ದರಿಂದ ರೈಲಿನ ಪೈಲೆಟ್, ರೈಲನ್ನು ನಿಲ್ಲಿಸಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆ ತಂದಿದ್ದಾರೆ, ಆದರೆ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆ ನಡೆದ ಸಂದರ್ಭ ರೈಲ್ವೇ ಪೈಲೆಟ್ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ನೀಡಿದ ಮಾಹಿತಿಯಂತೆ ಪುತ್ತೂರು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಬಂದಿತ್ತಾದರೂ ಯುವಕ ಕೊನೆಯುಸಿರೆಳೆದಿದ್ದ. ನಂತರ ರೈಲ್ವೇ ಇಲಾಖೆಯ ಪೊಲೀಸ್ ಬಂದ ಬಳಿಕ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ರೈಲು ನಿಲ್ದಾಣದಲ್ಲಿ ಮೃತ ದೇಹವನ್ನು ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ರೈಲಿನಡಿ ಬಿದ್ದ ಯುವಕನನ್ನು ಉತ್ತರ ಪ್ರದೇಶ ಮೂಲದವನು ಎನ್ನಲಾಗುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಕಾಲು ಜಾರಿ ಬಿದ್ದನೇ ಎಂಬ ಮಾಹಿತಿ ತನಿಖೆಯ ನಂತರ ತಿಳಿದುಬರಬೇಕಿದೆ