ಸುಳ್ಯ: ಪ್ರತಿಷ್ಠಿತ ಅಸ್ತ್ರ ಸ್ಪೋರ್ಟ್ಸ್ ಕ್ಲಬ್(ರಿ) ಪೈಚಾರ್ ಇದರ ಮಹಾಸಭೆಯು ಅಸ್ತ್ರ ಸ್ಪೋರ್ಟ್ಸ್ ಇದರ ಅಧ್ಯಕ್ಷರಾದ ಲತೀಫ್ ಟಿ.ಎ ಅವರ ನೇತೃತ್ವದಲ್ಲಿ ಅಗಸ್ಟ್ 9 ರಂದು ಶಾಂತಿನಗರದಲ್ಲಿ ನಡೆಯಿತು. 2023-24 ರ ವರದಿ, ಲೆಕ್ಕ ಪತ್ರ ಮಂಡನೆ , ಮುಂತಾದ ವಿಷಯಗಳ ನಂತರ 2024-25 ರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ರಿಫಾಯಿ ಎಸ್.ಎ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸತ್ತಾರ್ ಪಿ.ಎ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಕೆ.ಪಿ ಜೊತೆ ಕಾರ್ಯದರ್ಶಿಯಾಗಿ ಝುಬೈರ್ ಉಬಿ, ಕೋಶಾಧಿಕಾರಿಯಾಗಿ ಹನೀಫ್ ಅಲ್ಘಾ ಹಾಗೂ ಸದಸ್ಯರಾಗಿ ನಝೀರ್ ಶಾಂತಿನಗರ, ಬಶೀರ್ ಆರ್.ಬಿ, ಮುಜೀಬ್ ಆರ್ತಾಜೆ, ಸಿರಾಜ್ ಎಸ್.ಪಿ, ಬಶೀರ್ ಕೆ.ಪಿ, ಇಬ್ರಾಹಿಂ, ಅಶ್ರಫ್, ಆರಿಸ್ ಶಾಂತಿನಗರ ಇವರುಗಳನ್ನು ಆಯ್ಕೆ ಮಾಡಲಾಯಿತು.