ಬೆಂಗಳೂರು ಅಗಸ್ಟ್ 11: ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಜೊತೆ ಮಂಗಳೂರಿನ ಬೆಡಗಿ ನಟಿ ನಟಿ ಸೋನಲ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಇಂದು ಮದುವೆ ನಡೆದಿದೆ.ತರುಣ್ ಹಾಗೂ ಸೋನಲ್ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಕಳೆದ ಕೆಲ ತಿಂಗಳಿನಿಂದ ಈಚೆಗೆ ಈ ಇಬ್ಬರ ನಡುವಿನ ಪ್ರೇಮ ಸಂಬಂಧ ಹೊರಬಿದ್ದಿತ್ತು. ಇಬ್ಬರೂ ಸಹ ತಮ್ಮ ಕುಟುಂಬದವರನ್ನು ಒಪ್ಪಿಸಿ ಇದೀಗ ಎಲ್ಲ ಗೆಳೆಯರು, ಆತ್ಮೀಯರನ್ನು ಕರೆದು ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ಬೆಂಗಳೂರಿನ ಕೆಂಗೆರೆ ಬಳಿ ಇರೋ ಪೂರ್ಣಿಮಾ ಪ್ಯಾಲೇಸ್ನಲ್ಲಿ ಇವರ ಅದ್ಧೂರಿ ಮದುವೆ ನೆರವೇರಿದೆ. ತರುಣ್ ಸುಧೀರ್ ಮೂಲತಃ ಉತ್ತರ ಕರ್ನಾಟಕದ ಕುಟುಂಬದವರಾದರೂ ದಶಕಗಳಿಂದಲೂ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಇನ್ನು ನಟಿ ಸೋನಲ್ ಮಂಗಳೂರಿನವರು. ಇವರಿಬ್ಬರೂ ಕಳೆದ ಕೆಲ ವರ್ಷಗಳಿಂದಲೂ ಪ್ರೀತಿಯಲ್ಲಿದ್ದಾರೆ. ತರುಣ್ ನಿರ್ದೇಶನ ಮಾಡಿದ್ದ ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ತುಳು ಸಿನಿಮಾ ಮೂಲಕ ನಟನೆ ಆರಂಭಿಸಿದ ಸೋನಲ್, ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಟ್ಟರು ನಿರ್ದೇಶನ ಮಾಡಿರುವ ‘ಪಂಚತಂತ್ರ’, ‘ಗರಡಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ‘ಬುದ್ಧಿವಂತ 2’ ಹಾಗೂ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.