ರಾಮನಗರ: ಲಕ್ಷ್ಮಿ ದೇವಿ ಮತ್ತು ಯೇಸು ಕ್ರಿಸ್ತ ಯ ಚಿತ್ರಗಳನ್ನು ಪ್ರದರ್ಶಿಸುವ ಪಡಿತರ ಚೀಟಿಗಳನ್ನು ತೋರಿಸುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ ವೈರಲ್ ಆಗಿದ್ದು, ಇದು ರಾಮನಗರ ಜಿಲ್ಲೆಯಲ್ಲಿ ವಿವಾದಕ್ಕೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹುಟ್ಟೂರಾದ ರಾಮನಗರದ ದೊಡ್ಡ ಆಲನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರೇಷನ್ ಕಾರ್ಡ್ನ ಹಿಂಭಾಗದ ಪುಟದಲ್ಲಿ ದೇವರ ಚಿತ್ರಗಳನ್ನು ಮುದ್ರಿಸಲಾಗಿದ್ದು, ಈ ಘಟನೆಯನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ತನಿಖೆಗೆ ಆಗ್ರಹಿಸಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಶ್ರೀರಾಮಸೇನೆ ತಿಳಿಸಿದೆ.

ಕ್ರೈಸ್ತ ಧರ್ಮವನ್ನು ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಇನ್ನೂ ದೂರು ದಾಖಲಿಸಿಲ್ಲ, ಆದರೆ ಜಿಲ್ಲೆಯ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ. ಕೆಲದಿನಗಳ ಹಿಂದಷ್ಟೇ ಬೌದ್ಧ ಧರ್ಮಕ್ಕೆ ಮತಾಂತರವಾಗಲು ಮುಂದಾಗಿರುವ ಕೆಲ ವ್ಯಕ್ತಿಗಳು ಹಿಂದೂ ದೇವರ ಫೋಟೋಗಳನ್ನ ನದಿಗೆ ಎಸೆದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿತ್ತು. ಹಿಂದೂ ಧರ್ಮದ ದೇವರುಗಳ ಫೋಟೋಗಳನ್ನು ನದಿಗೆ ಎಸೆದ ಕೃತ್ಯವನ್ನು ಹಿಂದೂ ಕಾರ್ಯಕರ್ತರು ಕಟುವಾಗಿ ಟೀಕಿಸಿದ್ದರು.