Advertisement

ಸುಬ್ರಹ್ಮಣ್ಯ: ಅ.25 ರಂದು ಈ ವರ್ಷದ ಕೊನೆಯ ಗ್ರಹಣವಾದ ಸೂರ್ಯಗ್ರಹಣ ಗೋಚರವಾಗಲಿದೆ. ಪರಿಣಾಮ ದ.ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದಲ್ಲಿ ಅನ್ನದಾನ ಸೇರಿದಂತೆ ಯಾವುದೇ ಸೇವೆಗಳು ಜರಗುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ.


ಅ.25ರಂದು ಮಧ್ಯಾಹ್ನ 2.30ರಿಂದ ರಾತ್ರಿ 7.30ರವರೆಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮರುದಿನ ಬೆಳಿಗ್ಗೆ ಕೂಡಾ ದೇವರ ನಿತ್ಯದ ಪೂಜೆಯ ಸಮಯದಲ್ಲಿ ಕೂಡಾ ವ್ಯತ್ಯಾಸವಾಗುವುದರಿಂದ ಬೆಳಿಗ್ಗೆ 9ಗಂಟೆಗೆ ಸರಿಯಾಗಿ ಭಕ್ತರಿಗೆ ದೇವರ ದರ್ಶನ ಪಡೆಯಬಹುದು ಎಂದು ತಿಳಿದುಬಂದಿದೆ.
Advertisement