ರಾಯಚೂರು: ಇಂದು ಕಾಂಗ್ರೆಸ್’ನ ‘ಭಾರತ್ ಜೋಡೋ ಯಾತ್ರೆ’ ಮತ್ತೆ ಕರ್ನಾಟಕವನ್ನು ಪ್ರವೇಶಿಸಲಿದೆ. ಮಂತ್ರಾಲಯದಿಂದ ಆರಂಭವಾದ ಪಾದಯಾತ್ರೆ ಇಂದು ಆಂಧ್ರಪ್ರದೇಶ ಗಡಿ ದಾಟಿ ಕರ್ನಾಟಕದ ರಾಯಚೂರು ಜಿಲ್ಲೆಗೆ ಪ್ರವೇಶ ಮಾಡಲಿದೆ.

ತುಂಗಭದ್ರಾ ಸೇತುವೆ ಪಕ್ಕದ ರಾಯಚೂರು ತಾಲ್ಲೂಕಿನ ಗಿಲ್ಲೇಸುಗೂರು ಗ್ರಾಮದಲ್ಲಿ ರಾಹುಲ್‌ ಗಾಂಧಿ ಅವರನ್ನು ಕಾಂಗ್ರೆಸ್‌ ಹಿರಿಯ ನಾಯಕರು ಸ್ವಾಗತ ಮಾಡಲಿದ್ದಾರೆ. ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಮೊದಲ ದಿನ 25 ಕಿಲೋಮೀಟರ್‌ ಭಾರತ್‌ ಜೋಡೊ ಪಾದಯಾತ್ರೆ ನಡೆಯಲಿದೆ. ಇಂದು ರಾತ್ರಿ ಯರಗೇರಾ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ನಾಳೆ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದೆ. ಹಾಗೂ ಗುರುವಾರ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದಿದ್ದಾರೆ. ಶ್ರೀ ಸುಭುದೇಂದ್ರ ತೀರ್ಥರ ಜೊತೆಗೆ ಕೆಲ ಸಮಯ ಚರ್ಚೆ ನಡೆಸಿದ ಬಳಿಕ, ರಾಹುಲ್ ತಲೆ ಮೇಲೆ ಕೈ ಇಟ್ಟು ಶ್ರೀಗಳು ಆಶೀರ್ವಾದ ಮಾಡಿದರು. ಶ್ರೀಗಳಿಗೆ ಹಣ್ಣು ಹಂಪಲು ನೀಡಿ ಆಶೀರ್ವಾದ ಪಡೆದ ಬಳಿಕ ರಾಹುಲ್ ಗಾಂಧಿ, ಬೆಳ್ಳಿ ಖಡ್ಗವನ್ನು ಕಾಣಿಕೆಯನ್ನಾಗಿ ನೀಡಿದ್ದಾರೆ. ಆದರೆ ಶ್ರೀಗಳು ಇದನ್ನು ನಯವಾಗಿ ತಿರಸ್ಕರಿಸಿದ್ದಾರೆ ಇದಕ್ಕೆ ಕಾರಣ ಏನೆಂದು ತಿಳಿದಿಲ್ಲ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ