Advertisement

ವಿಟ್ಲ: ಮಹಿಳೆಯೊಬ್ಬರನ್ನು ಮಾನಭಂಗಕ್ಕೆ ಯತ್ನಿಸಿದ ಆರೋಪದಡಿಯಲ್ಲಿ, ಪೋಲಿಸರು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಸಂತೂ ಯಾನೆ ಸಂತೋಷ್ ಎಂದು ಗುರುತಿಸಲಾಗಿದೆ.

ಕನ್ಯಾನ ಗ್ರಾಮದ ವಿವಾಹಿತ ಮಹಿಳೆಯ ಮಾನಭಂಗಕ್ಕೆ ಈ ಆರೋಪಿ ಯತ್ನಿಸಿದ್ದಾನೆ. ಕೆಂಪು ಕಲ್ಲು ಲಾರಿಯಲ್ಲಿ ಲೋಡರ್ ಕೆಲಸ ಮಾಡುತ್ತಿದ್ದ ಈ ಆರೋಪಿ ಸಂತೋಷ್, ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ತಡೆದು ನಿಲ್ಲಿಸಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಮಹಿಳೆಯ ಸಂಬಂಧಿಕರು ಈ ಕೃತ್ಯವನ್ನು ನೋಡಿದ್ದಾರೆ ಎನ್ನಲಾಗಿದೆ.

ಇನ್ನು ಈ ವೇಳೆ ಆತ ಬೈಕ್ ಬಿಟ್ಟು ಪರಾರಿಯಾಗಿದ್ದ ಎಂದು ವಿಟ್ಲ ಪೊಲೀಸ್ ಠಾಣೆ ಗೆ ದೂರು ನೀಡಿದ್ದು. ದೂರಿನ ಅನ್ವಯ ಕಾರ್ಯಚರಣೆ ನಡೆಸಿದ ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್.ಅವರ ನೇತೃತ್ವದ ಎಸ್.ಐ.ಸಂದೀಪ್ ಅವರ ತಂಡ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Advertisement