ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕನಿಷ್ಠ ವೇತನವನ್ನು(Minimum Wages) ಗಣನೀಯವಾಗಿ ಹೆಚ್ಚಳ (ಅರುವತ್ತು ಶೇಖಡ)ಮಾಡುವ ಮೂಲಕ ಐತಿಹಾಸಿಕ ಮತ್ತು ಶ್ರಮಿಕ ಸ್ನೇಹಿ ನಿರ್ಧಾರವನ್ನು ಕೈಗೊಂಡಿದ್ದು ಸರ್ಕಾರದ ಈ ಜನಪರವಾದ ಕ್ರಮದಿಂದಾಗಿ ಇಡೀ ರಾಜ್ಯಾದ್ಯಂತ ಇರುವ ಸುಮಾರು ಎರಡು ಕೋಟಿಯಷ್ಟು ಹೆಚ್ಚು ಕಾರ್ಮಿಕರು ಮತ್ತು ಅವರ ಕುಟುಂಬದವರು ನೇರ ಆರ್ಥಿಕ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆಯನ್ನು ಪಡೆಯುವಂತಾಗಿದೆ.
ಶ್ರಮಜೀವಿಗಳ ಬದುಕಿಗೆ ಆಸರೆಯಾಗಿ, ಅವರ ಆರ್ಥಿಕ ಸುಧಾರಣೆಗೆ ಇಷ್ಟೊಂದು ದೊಡ್ಡ ಮಟ್ಟದ ಕೊಡುಗೆ ನೀಡಿದ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಕೆಪಿಸಿಸಿ ಅಧ್ಯಕ್ಷರೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಹಾಗೂ ಮಂಡಳಿಯ ಪರವಾಗಿ ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಕೃತಜ್ಞತೆಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸಿ ಇದು ಅತ್ಯಂತ ಹೆಮ್ಮೆಯ ಹಾಗು ಐತಿಹಾಸಿಕ ನಿರ್ಧಾರ ಎಂದಿದ್ದಾರೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಕಾರ್ಮಿಕ ಹಕ್ಕುಗಳನ್ನು ರಕ್ಷಿಸುವ ಆಶ್ವಾಸನೆ ಪ್ರಣಾಳಿಕೆ ನೀಡಿದ್ದು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನಾಲ್ಕು ಸಂಕೇತದ ಮಧ್ಯದಲ್ಲಿ ರಾಜ್ಯದ ಪ್ರತಿಯೊಬ್ಬ ಕಾರ್ಮಿಕನ ಮುಖದಲ್ಲೂ ಈ ಮಂದಹಾಸ ಮೂಡಿಸಿದ ಇಂತಹ ನಿರ್ಧಾರ ಸಹಿತ ಹಲವಾರು ಜನಪರ ಯೋಜನೆಗಳು ಸರ್ಕಾರದಿಂದ ನಿರಂತರವಾಗಿ ಮೂಡಿ ಬಂದಿದೆ
ರಾಜ್ಯ ಸರ್ಕಾರದ ಈ ಐತಿಹಾಸಿಕ ನಿರ್ಧಾರಕ್ಕೆ ನಮ್ಮ ಮಂಡಳಿಯು ಸದಾ ಕೃತಜ್ಞವಾಗಿರುತ್ತದೆ ಎಂದು
ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ
ಕರ್ನಾಟಕ ಸರ್ಕಾರದ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಸಂತಸ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *