Category: ತಾಲ್ಲೂಕು

ಸುಳ್ಯ : ಜುಲೈ 7 ಭೂಕಂಪನ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್ ಭೇಟಿ

ಸುಳ್ಯ: ಸಂಪಾಜೆ ಭೂಕಂಪನ ಮತ್ತು ನೆರೆಪೀಡಿತ ಪ್ರದೇಶಗಳಿಗೆ ಜು.7 ರಂದು ಕರ್ನಾಟಕ ರಾಜ್ಯ ಸರಕಾರದ ಕಂದಾಯ ಸಚಿವ ಆರ್.ಅಶೋಕ್‌ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌, ಪೂ.10ಕ್ಕೆ ಚೆಂಬು ಗ್ರಾಮದ ಭೂಕಂಪನ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ…

ಸುಳ್ಯ: ಹೆಚ್ಚುತ್ತಿರುವ ಭೂಕಂಪನ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಆಗ್ರಹಿಸಿ SDPI ಯಿಂದ ತಹಶೀಲ್ದಾರರಿಗೆ ಮನವಿ.

ಸುಳ್ಯ (ಜು.04):- ತಾಲ್ಲೂಕಿನ ಸಂಪಾಜೆ, ಗೂನಡ್ಕ,ಚೆಂಬು ಸೇರಿದಂತೆ ಮುಂತಾದ ಹಲವು ಕಡೆಗಳಲ್ಲಿ ಕಳೆದ ಒಂದು ವಾರದಲ್ಲಿ 6 ಕ್ಕೂ ಹೆಚ್ಚು ಬಾರಿ ಭೂಕಂಪನ ಉಂಟಾದ ವಿಚಾರವಾಗಿ ಎಸ್ಡಿಪಿಐ ಸುಳ್ಯ ನಿಯೋಗ ತಹಶೀಲ್ದಾರರನ್ನು ಭೇಟಿಯಾಗಿ ಈ ಕೆಳಗಿನ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.ತಾಲ್ಲೂಕಿನ…

ಮೊಗರ್ಪಣೆ: ಭೂಕಂಪ, ಪಕೃತಿ ವಿಕೋಪದಿಂದ ರಕ್ಷಣೆಗಾಗಿ ವಿಶೇಷ ಪ್ರಾರ್ಥನೆ.!

ಕಳೆದ ಕೆಲವು ದಿನಗಳಿಂದ ಸುಳ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಭೂಕಂಪನ ದಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ಈ ನಿಟ್ಟಿನಲ್ಲಿ ಭೂಕಂಪನದಿಂದ ರಕ್ಷಣೆ ಕೋರಿ ಇಂದು ಮೊಗರ್ಪಣೆ ಜುಮಾ ಮಸೀದಿಯಲ್ಲಿ ಶುಕ್ರವಾರದ ನಮಾಜಿನ ಬಳಿಕ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಮೊಗರ್ಪಣೆ ಜುಮಾ ಮಸ್ಜಿದ್ ಮುದರ್ರಿಸ್…

ಸುಳ್ಯ: ರಾತ್ರಿ 1-15ಕ್ಕೆ ಮತ್ತೆ ಭೂಕಂಪದ ಅನುಭವ.!

ಸುಳ್ಯ: ಒಟ್ಟು ನಾಲ್ಕನೇ ಬಾರಿಗೆ ಸುಳ್ಯದಲ್ಲಿ ಭೂಕಂಪದ ಅನುಭವವಾಗಿದೆ. ರಾತ್ರಿ ಗಂಟೆ ಸರಿಸುಮಾರು 1-15 ಕ್ಕೆ ಕಂಪಿಸಿದ ಅನುಭವವಾಗಿದೆ. ಸಂಪಾಜೆ, ಗೂನಡ್ಕ, ಪೆರಾಜೆ, ಅರಂಬೂರು, ಕುರುಂಜಿಗುಡ್ಡೆ ಶಾಂತಿನಗರ, ಹಳೆಗೇಟು ಹೀಗೆ ತಾಲೂಕಿನ ಹಲವು ಭಾಗದಲ್ಲಿ ಭೂಮಿ ಕಂಪಿಸಿದ್ದು ಇನ್ನು ಹಲವರಿಗೆ ಭಾರಿ…

ನಾರ್ಕೋಡು ಬಳಿ ತೋಟಕ್ಕೆ ಉರುಳಿದ ಕಾರು, ನಾಲ್ವರಿಗೆ ಗಾಯ.!

ಬಂದಡ್ಕ ಭಾಗದಿಂದ ಕೋಲ್ಚಾರು-ನಾರ್ಕೋಡು ರಸ್ತೆಯಾಗಿ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ತೆಲುಂಗಾಣ ನೋಂದಣಿ ಸ್ವಿಫ್ಟ್ ಡಿಝೈರ್ ಕಾರೊಂದು ಕಳೆದ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ನಾರ್ಕೋಡು ಬಳಿ ಜೆ.ಕೆ.ರೈ ಯವರ ತೋಟಕ್ಕುರುಳಿದ ಘಟನೆ ನಡೆದಿದೆ. ಪ್ರಯಾಣಿಕರು ಹೈದರಾಬಾದ್ ಮೂಲದವರಾಗಿದ್ದು, ಕನ್ಯಾಕುಮಾರಿ , ಗುರುವಾಯೂರು…

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಆರ್’ಜೆ ತ್ರಿಶೂಲ್ ವಿಡಿಯೋ.!

ಸುಳ್ಯ: ಅರಂತೋಡು – ಎಲಿಮಲೆ ರಸ್ತೆ ಹದಗೆಟ್ಟಿದ್ದು, ದುರಸ್ತಿ ಕಾರ್ಯವಾಗದ ಕಾರಣ ಅಲ್ಲಿನ ಮತದಾರರು, ಮತದಾನ ಬಹಿಷ್ಕಾರ ಬ್ಯಾನರ್’ಗಳನ್ನು ಅಲವಡಿಸಿದ್ದಾರೆ. ಈ ರಸ್ತೆ ಹಾಗೂ ಬ್ಯಾನರ್ ಕುರಿತು ಆರ್.ಜೆ ತ್ರಿಶೂಲ್ ರವರು ವಿಡಿಯೋ ಒಂದನ್ನು ಮಾಡಿ ಹಂಚಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ…

ಸುಳ್ಯ: 4 ವರ್ಷದ ಮಗಳನ್ನು ಜೊತೆ ಸೇರಿಸಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ: ತಾಯಿ ಮೃತ್ಯು- ಬದುಕುಳಿದ ಮಗಳು.!

ಸುಳ್ಯ: ನಾಲ್ಕು ವರ್ಷ ಪ್ರಾಯವುಳ್ಳ ಮಗಳ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ವರದಿಯಾಗಿದೆ. ತಾಯಿ ಅಸುನೀಗಿದ್ದು, ಮಗಳು ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಮೃತಪಟ್ಟವರು ಅಗ್ನಿಶಾಮಕ ದಳದ ಸಿಬ್ಬಂದಿ ದಯಾನಂದ ಎಂಬವರ…

ಸಂಪಾಜೆಯಲ್ಲಿ ಮತ್ತೆ ಕಂಪಿಸಿದ ಭೂಮಿ.! ತಬ್ಬಿಬ್ಬಾದ ಜನರು.

ಸಂಪಾಜೆಯಲ್ಲಿ ಇಂದು ಸಂಜೆ 4.40 ಕ್ಕೆ ಮಗದೊಮ್ಮೆ ಭೂಕಂಪದ ಅನುಭವ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಸಂಪಾಜೆ ಗ್ರಾಮ ಪಂಚಾಯತ್ ವಾಟ್ಸಪ್ ಗ್ರೂಪ್‌ ನಲ್ಲಿ ಅಧ್ಯಕ್ಷ ಜಿ.ಕೆ. ಹಮೀದ್ ಅವರು ತಿಳಿಸಿದ್ದು, ಹಾಗೂ ಇನ್ನೂ ಹಲವರಿಗೆ ಲಘು ಕಂಪನದ ಅನುಭವ ಆಗಿದೆ…

ಸುಳ್ಯ: ಮಗದೊಮ್ಮೆ ಕಂಪಿಸಿದ ಭೂಮಿ.!

ಸುಳ್ಯ ತಾಲೂಕಿನ ಹಲವೆಡೆ ಮಗದೊಮ್ಮೆ ಭೂಮಿ ಕಂಪಿಸಿದೆ. ಇಂದು‌ ಬೆಳಿಗ್ಗೆ ಸುಮಾರು ಗಂಟೆ 7:45 ಕ್ಕೆ ಲಘು ಭೂಕಂಪನದ ಅನುಭವವಾಗಿದೆ. ಸುಳ್ಯ ಅಸುಪಾಸಿನ ಉಬರಡ್ಕ, ಮಡಪ್ಪಾಡಿ, ಕೊಲ್ಲಮೊಗ್ರ, ದೇವಚಳ್ಳ, ಆಲೆಟ್ಟಿ ಪೆರಾಜೆ, ಪೈಚಾರ್, ಶಾಂತಿನಗರ ಈ ಪ್ರದೇಶಗಳಲ್ಲಿ ಕಂಪನದ ಅನುಭವವಾದ ಬಗ್ಗೆ…

ಕುಂಬರ್ಚೋಡು: ಗ್ಯಾಸ್ ಲಾರಿ ಪಲ್ಟಿ

ಮಂಗಳೂರು ಕಡೆಯಿಂದ ಮಡಿಕೇರಿ ಕಡೆ ಗ್ಯಾಸ್ ತುಂಬಿಸಿಕೊಂಡು ಹೊರಟಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕುಂಬರ್ಚೋಡು ವೈಲ್ಡ್ ಕಫೆ ಬಳಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ