ತಿಲಾವಃ ಪ್ರೀ ಸ್ಕೂಲ್‌ನಿಂದ ‘ಸ್ಟೇಟಸ್ ಚಾಲೆಂಜ್‌’; ಗೋಲ್ಡ್ ಕಾಯಿನ್ ಹಾಗೂ ವಿಶೇಷ ಆಫರ್‌ಗಳ ವಿಜೇತರ ಘೋಷಣೆ

ಸುಳ್ಯ: ಸುಳ್ಯ ಗಾಂಧಿನಗರದ KA ನಾಲೆಡ್ಜ್ ಸೆಂಟರ್‌ನ ತಿಲಾವಃ ಪ್ರೀ ಸ್ಕೂಲ್ ಆಯೋಜಿಸಿದ್ದ ‘ಸ್ಟೇಟಸ್ ಚಾಲೆಂಜ್’ ನಲ್ಲಿ ಟೋಕನ್ ಸಂಖ್ಯೆ 308-ಹಸೀಬಾ ಜುನೈದ್ ಹಳೆಗೇಟು ಚಿನ್ನದ ನಾಣ್ಯದ ಬಹುಮಾನವನ್ನು ಪಡೆದುಕೊಂಡಿದ್ದಾರೆ.ಲಕ್ಕಿ ಡ್ರಾ ಮೂಲಕ ಆಯ್ಕೆಯಾದ 10 ಕುಟುಂಬಗಳ ಮಕ್ಕಳಿಗೆ ಪ್ರವೇಶಾತಿ ಶುಲ್ಕದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ,20 ಕುಟುಂಬಗಳ ಮಕ್ಕಳಿಗೆ ಶೇಕಡಾ 35 ರಷ್ಟು ರಿಯಾಯಿತಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಶೇಕಡಾ 15 ರಷ್ಟು ಪ್ರವೇಶಾತಿ ರಿಯಾಯಿತಿ ಲಭ್ಯವಾಗಲಿದೆ.ಮಕ್ಕಳ ಬಾಲ್ಯವು ಕೇವಲ ಆಟಕ್ಕಷ್ಟೇ ಸೀಮಿತವಾಗಿರದೆ, ಅವರ […]

Read More

ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜು: ಪಿಯುಸಿ ವಿದ್ಯಾರ್ಥಿನಿಯರಿಗೆ ರಫೀಕ್ ಮಾಸ್ಟರ್ ಅವರಿಂದ ಪ್ರೇರಣಾದಾಯಕ ಉಪನ್ಯಾಸ

ಮಂಗಳೂರು: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬರಕಾ ಇಂಟರ್‌‌ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯರಿಗಾಗಿ ಖ್ಯಾತ ಮಾರ್ಗದರ್ಶಕ ರಫೀಕ್ ಮಾಸ್ಟರ್ ಅವರಿಂದ “ನಿಮ್ಮೊಳಗಿನ ಶಕ್ತಿ – ಪ್ರೇರಣೆ ಮತ್ತು ಕಲಿಕೆಯ ಒಂದು ದಿನ” ಎಂಬ ವಿಷಯದ ಕುರಿತು ವಿಶೇಷ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಫೀಕ್ ಮಾಸ್ಟರ್ ಅವರು, ಜೀವನದಲ್ಲಿ ಉನ್ನತ ಯಶಸ್ಸು ಗಳಿಸಲು ಆತ್ಮವಿಶ್ವಾಸ, ಸ್ವಯಂ ನಂಬಿಕೆ, ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸ ಅತ್ಯಂತ ಅಗತ್ಯ ಎಂದು ಒತ್ತಿ ಹೇಳಿದರು. […]

Read More

ಎನ್ನೆಂಸಿ: ಯುವ ರೆಡ್‌ಕ್ರಾಸ್ ಚಟುವಟಿಕೆಗಳಿಗೆ ಚಾಲನೆ

ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಿ- ಹೇಮನಾಥ ಕೆ ವಿ ರಸ್ತೆ ಸುರಕ್ಷತೆ, ಅಪರಾಧ ತಡೆ ಹಾಗೂ ಮಾದಕ ದ್ರವ್ಯಗಳ ದುರ್ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ ಯುವಜನತೆ ಎಚ್ಚರಿಕೆಯಿಂದ ಹೆಜ್ಜೆಯಿಡಿ: ಎಸ್ ಐ ಉದಯರವಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮಹಿರಿಯರು ಕಿರಿಯರಿಗೆ ಮಾದರಿಯಾಗಿರಿ.– ಚಂದ್ರಶೇಖರ ಪೇರಾಲು ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ 2026–27ನೇ ಸಾಲಿನ ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಸೆ. 26ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಕಾಡೆಮಿ ಆಫ್ […]

Read More

ವಿದ್ಯಾರ್ಥಿನಿ ಕೋಮಾ ಸ್ಥಿತಿಯಲ್ಲಿ: ಶಾಹೀನ್ ಕಾಲೇಜು ಆಡಳಿತದ ಹೊಣೆಗಾರಿಕೆ ಪ್ರಶ್ನಾರ್ಹ : ವಿಮೆನ್ ಇಂಡಿಯಾ ಮೂವ್ಮೆಂಟ್

ಬೀದರ್‌ನ ಶಾಹೀನ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಮಂಗಳೂರಿನ ಯುವತಿಯೊಬ್ಬಳು ಅನಾರೋಗ್ಯಕ್ಕೆ ತುತ್ತಾಗಿ ಗಂಭೀರ ಸ್ಥಿತಿಗೆ ತಲುಪಿ, ಇದೀಗ ಕೋಮಾ ಸ್ಥಿತಿಯಲ್ಲಿರುವುದು ಅತ್ಯಂತ ಆತಂಕಕಾರಿ ಹಾಗೂ ನೋವಿನ ಸಂಗತಿಯಾಗಿದೆ ಎಂದು ವಿಮೆನ್ ಇಂಡಿಯಾ ಮೂಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಹೇಳಿದ್ದಾರೆ . ವಿದ್ಯಾರ್ಥಿಗಳ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣವನ್ನು ಖಾತ್ರಿಪಡಿಸುವುದು ಯಾವುದೇ ಶಿಕ್ಷಣ ಸಂಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ.ವಿಶೇಷವಾಗಿ ಹಾಸ್ಟೆಲ್‌ನ ಆಹಾರ ವ್ಯವಸ್ಥೆ, ಸ್ವಚ್ಛತೆ, ಕುಡಿಯುವ ನೀರು, ವಿದ್ಯಾರ್ಥಿಗಳ ಆರೋಗ್ಯದ ಮೇಲ್ವಿಚಾರಣೆ ಹಾಗೂ ತುರ್ತು ವೈದ್ಯಕೀಯ ಕ್ರಮಗಳು […]

Read More

ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫೀ, ರೀಲ್ಸ್, ವಿಡಿಯೋ ಚಿತ್ರೀಕರಣಕ್ಕೆ ಸಂಪೂರ್ಣ ನಿಷೇಧ

ರಾಜ್ಯದಾದ್ಯಂತ ನಡೆಯುವ ಶೈಕ್ಷಣಿಕ ಪ್ರವಾಸಗಳ ವೇಳೆ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದು ಮತ್ತು ಯಾವುದೇ ರೀತಿಯ ವೀಡಿಯೊ ಚಿತ್ರೀಕರಣ ಮಾಡುವುದನ್ನು ಶಿಕ್ಷಣ ಇಲಾಖೆ ಕಟ್ಟುನಿಟ್ಟಾಗಿ ನಿಷೇಧಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫೀ, ವೀಡಿಯೊಗಳಿಂದ ಸಂಭವಿಸಬಹುದಾದ ದುರ್ಘಟನೆಗಳನ್ನು ತಡೆಯಲು ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ, ಕಾಲೇಜುಗಳು ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಮೊದಲು ಕಡ್ಡಾಯವಾಗಿ ಇಲಾಖೆಯಿಂದ ಪೂರ್ವ ಅನುಮತಿ ಪಡೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಈ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟ ಅರಿವು ಮೂಡಿಸುವುದು […]

Read More

ಅರಂತೋಡು ಪದವಿ ಪೂರ್ವ ಕಾಲೇಜಿಗೆ ಪಠೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೀಲಿಂಗ್ ಫ್ಯಾನ್ ಕೊಡುಗೆ

ಪಠೇಲ್ ಚಾರಿಟೇಬಲ್ ಟ್ರಸ್ಟ್ ಅರಂತೋಡು ಇದರ ವತಿಯಿಂದ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿಗೆ ನಾಲ್ಕು ಸೀಲಿಂಗ್ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಸೆ.11 ರಂದು ನಡೆದ ಸರಳ ಸಮಾರಂಭದಲ್ಲಿ ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಬದ್ರುದ್ಧೀನ್ ಪಠೇಲ್ ರವರು ಶಾಲಾ ಸಂಚಾಲಕ ಎ.ಸಿ. ವಸಂತ್ ರವರಿಗೆ ಪ್ಯಾನ್ ಗಳನ್ನು ಹಸ್ತಾಂತರಿಸಿದರು . ಈ ಸಂಧರ್ಭದಲ್ಲಿ ಪಠೇಲ್ ಟ್ರಸ್ಟ್ ನ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಠೇಲ್, ನಿರ್ದೇಶಕ ಸೈಫುದ್ದೀನ್ ಪಠೇಲ್ ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ […]

Read More

ಸುಳ್ಯದ ಜನತೆಗೆ ಶುಭ ಸುದ್ದಿ: ತಿಲಾವ ಪ್ರೀ ಸ್ಕೂಲ್ ಶುಭಾರಂಭ! ವಾಟ್ಸಾಪ್ ಸ್ಟೇಟಸ್ ಹಾಕಿ ‘ಗೋಲ್ಡ್ ಕಾಯಿನ್’ ಹಾಗೂ ಭರ್ಜರಿ ಆಫರ್ ಗೆಲ್ಲುವ ಸುವರ್ಣಾವಕಾಶ!

ಸುಳ್ಯ: ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಧಾರ್ಮಿಕ ಮತ್ತು ನೈತಿಕ ಸಂಸ್ಕಾರವನ್ನು ನೀಡುವುದು ಅತ್ಯಗತ್ಯವಾಗಿದ್ದು, ಸುಳ್ಯದ ಪೋಷಕರ ಈ ಬೇಡಿಕೆಯನ್ನು ಈಡೇರಿಸಲು 2 ರಿಂದ 5 ವರ್ಷದ ಪುಟಾಣಿ ಮಕ್ಕಳಿಗೆ ಆಧುನಿಕ ಹಾಗೂ ಇಸ್ಲಾಮಿಕ್ ಶಿಕ್ಷಣದ ಅತ್ಯುತ್ತಮ ಸಂಯೋಜನೆಯೊಂದಿಗೆ ಗಾಂಧಿನಗರದ ಜನತಾ ರೆಸಿಡೆನ್ಸಿಯಲ್ಲಿರುವ ಕೆ.ಎ. ನಾಲೆಡ್ಜ್ ಸೆಂಟರ್‌ನಲ್ಲಿ ‘ತಿಲಾವ ಪ್ರೀ ಸ್ಕೂಲ್’ (Tilavah Preschool) ಶುಭಾರಂಭಗೊಂಡಿದೆ. “Nurturing Faith, Building Future” ಎಂಬ ಉದಾತ್ತ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು […]

Read More

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ತಾಯಿಯ ನಂತರ ಮಗುವಿನ ಬದುಕನ್ನು ಹೆಚ್ಚು ಪ್ರಭಾವಿಸುವ ವ್ಯಕ್ತಿ ಎಂದರೆ ಅದು ಶಿಕ್ಷಕ: ಡಾ. ಮಮತಾ ಕೆ ಶಿಕ್ಷಕ ವೃತ್ತಿಯು ಅತ್ಯಂತ ಅಮೂಲ್ಯವಾದುದು. ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಕಾಣದಂತೆ ನಿಂತಿರುವ ಶಕ್ತಿ ಶಿಕ್ಷಕರದು. ತಾಯಿಯ ನಂತರ ಮಗುವಿನ ಬದುಕನ್ನು ಹೆಚ್ಚು ಪ್ರಭಾವಿಸುವ ವ್ಯಕ್ತಿ ಎಂದರೆ ಅದು ಶಿಕ್ಷಕ.ಶಿಕ್ಷಕರು ಕೇವಲ ಪಾಠವನ್ನು ಬೋಧಿಸುವವರಲ್ಲ; ಅವರು ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ, ಮೌಲ್ಯಗಳು ಮತ್ತು ಭವಿಷ್ಯವನ್ನು ರೂಪಿಸುವ ಮಾರ್ಗದರ್ಶಕರು ಎಂದು ಕಾಲೇಜಿನ ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ ಇವರು ಸೆಪ್ಟೆಂಬರ್ […]

Read More

ಶ್ರೀ ಶಾರದ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ.

ಆರೋಗ್ಯವಂತ ಯುವಜನತೆಯೇ ಸದೃಢ ಸಮಾಜದ ನಿರ್ಮಾಣಕ್ಕೆ ಬುನಾದಿ– ಡಾ. ಅನುರಾಧಾ ಕುರುಂಜಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ). ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅಜ್ಜಾವರ ವಲಯ ಹಾಗೂ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಅಜ್ಜಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯದ ಶ್ರೀ ಶಾರದ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ದಿನಾಂಕ 03/09/2026 ರಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಭಾರತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು […]

Read More

ಎನ್.ಎಂ.ಸಿ.: ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ “ಅಂತರ ಶಾಂತಿ” ಕಾರ್ಯಕ್ರಮ

ಸುಳ್ಯ: ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಕಾಲೇಜಿನ ಕ್ರೀಡಾಪಟುಗಳಿಗಾಗಿ “ಅಂತರ ಶಾಂತಿ – Meditation & Mindfulness” ಕಾರ್ಯಕ್ರಮವನ್ನು ಆಗಸ್ಟ್ 29ರಂದು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಕುಮಾರಿ ಸಂಸ್ಥೆಯ ಸುಳ್ಯ ಕೇಂದ್ರದ ಕೇಂದ್ರ ಉಸ್ತುವಾರಿ ಬ್ರಹ್ಮಕುಮಾರಿ ಉಮಾದೇವಿ ಭಾಗವಹಿಸಿ, ಧ್ಯಾನ, ಮೈಂಡ್‌ಫುಲ್‌ನೆಸ್ ಹಾಗೂ ಆಂತರಿಕ ಶಾಂತಿಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾಲೇಜಿನ […]

Read More