Category: ಅಪಘಾತ

ಪುತ್ತೂರು : ಕಾಲೇಜು ಉಪನ್ಯಾಸಕಿಯ ಜೀವಕ್ಕೆ ಕುತ್ತು ತಂದ ಕೊಡೆ..!

ಪುತ್ತೂರು : ಬೈಕಿಂದ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಮಾಡಾವು ಜ್ಯೂನಿಯರ್ ಕಾಲೇಜಿನ ಅತಿಥಿ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿಯವರು ಬುಧವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಶುಕ್ರವಾರ ತಮ್ಮ ಕುಟುಂಬದ…

ಪೆರಾಜೆ: ಆಟೋ ರಿಕ್ಷಾ ಮತ್ತು ಸ್ಕೂಟಿ ನಡುವೆ ಅಪಘಾತ..! ಸ್ಕೂಟಿ ಸವಾರ ಮೃತ್ಯು..!

ಪೆರಾಜೆಯ ಕಲ್ಚರ್ಪೆ ಬಳಿ ಅಟೋ ರಿಕ್ಷಾ ಮತ್ತು ಸ್ಕೂಟಿ ನಡುವೆ ಸೆ.7 ಸಂಜೆ ಅಪಘಾತ ನಡೆದಿದೆ. ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ ನವೀನ್‌(23) ಮೃತಪಟ್ಟವರು ಎಂದು ತಿಳಿದು ಬಂದಿದೆ. ನವೀನ್…

ಮಂಗಳೂರು: ಏರ್‌ಪೋರ್ಟ್ ರಸ್ತೆಯಲ್ಲಿ ತಡರಾತ್ರಿ ಬೈಕ್ ಸ್ಕಿಡ್ ಇಬ್ಬರು ಯುವಕರ ಸಾವು..!

ಮಂಗಳೂರು: ನಗರದ ಯೆಯ್ಯಾಡಿ ವಿಮಾನ ನಿಲ್ದಾಣ ರಸ್ತೆಯಲ್ಲಿ ತಡ ರಾತ್ರಿ ಹೀರೋ ಎಕ್ಸ್ ಪಲ್ಸ್ ಬೈಕೊಂದು ಸ್ಕಿಡ್ ಆಗಿ ಇಬ್ಬರು ಸವಾರರೂ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ಈ ಅವಘಡ ಸಂಭವಿಸಿದ್ದು ಕೋಡಿಕಲ್…

ಸಿಕ್ಕಿಂನಲ್ಲಿ ಕಮರಿಗೆ ಬಿದ್ದ ಸೇನಾ ವಾಹನ ; ನಾಲ್ವರು ‘ಸೈನಿಕರು’ ಹುತಾತ್ಮ

ಸಿಕ್ಕಿಂನಲ್ಲಿ ವಾಹನವೊಂದು ರಸ್ತೆಯಿಂದ ಜಾರಿ ಸುಮಾರು 700 ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಸಿಕ್ಕಿಂನ ಪಕ್ಯೋಂಗ್ ಜಿಲ್ಲೆಯ ಸಿಲ್ಕ್ ಮಾರ್ಗದಲ್ಲಿ ಪಶ್ಚಿಮ ಬಂಗಾಳದ ಪೆಡಾಂಗ್ನಿಂದ ಜುಲುಕ್ಗೆ ಈ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಸಿಕ್ಕಿಂನ ರೆನಾಕ್ ರೊಂಗ್ಲಿ ರಾಜ್ಯ…

ಗೂನಡ್ಕ: ಖಾಸಗಿ ಬಸ್- ಓಮ್ನಿ ಕಾರು ನಡುವೆ ಅಪಘಾತ.!

ಸಂಪಾಜೆ: ಇಲ್ಲಿನ ಗೂನಡ್ಕದ ಶಾಲೆ ಬಳಿ ಖಾಸಗಿ ಬಸ್ ಹಾಗೂ ಓಮ್ನಿ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಡಿಕೇರಿಯಿಂದ ಓಮಿನಿ…

ಪೈಚಾರ್: ದ್ವಿಚಕ್ರ ವಾಹನಗಳ ನಡುವೆ ಅಪಘಾತ- ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತ್ಯು

ಪೈಚಾರಿನಲ್ಲಿ ಸೆ.1ರಂದು ಮಧ್ಯಾಹ್ನ ಎರಡು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಬೈಕಿನಲ್ಲಿ ಸಹ ಸವಾರರಾಗಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದು ಕೂಡಲೆ ಸ್ಥಳೀಯರು ಅವರನ್ನು ಚಿಕಿತ್ಸೆಗಾಗಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದರು, ಬಳಿಕ ಹೆಚ್ಚಿನ ಚಿಕಿತ್ಸೆಗೆ…

ಒಮಾನ್: ಪ್ರವಾಸಕ್ಕೆಂದು ಹೊರಟ ಗೋಕಾಕ್ ಮೂಲದ ನಾಲ್ವರು ಅಪಘಾತದಲ್ಲಿ ಸಜೀವ ದಹನ

ಓಮಾನ್‌ನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ (Road Accident) ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ಪ್ರವಾಸಕ್ಕೆ ಹೋಗಿದ್ದ ಕುಟುಂಬ ಹೈಮಾ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ…

ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ..!

ಬ್ರೇಕ್ ವೈಫಲ್ಯದಿಂದ ಮಹೀಂದ್ರ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಪಲ್ಟಿಯಾಗಿದ ಘಟನೆ ಸಂಪಾಜೆ ಗ್ರಾಮದ ಕುಂಟಿಕಾನದಲ್ಲಿ ಆ.28ರಂದು ನಡೆದಿದೆ. ಕೆಲಸದಾಳುಗಳನ್ನು ಪಿಕಪ್ ವಾಹನದಲ್ಲಿ ಕರೆದೊಯ್ಯುವಾಗ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿಯಾಗಿದ್ದು, ಚಾಲಕ ಇಸ್ಮಾಯಿಲ್ ಸೇರಿದಂತೆ ಐವರು…

ಕಾಸರಗೋಡು: ಬಸ್ ಢಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಸಾವು..!

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಖಾಸಗಿ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸದುರ್ಗ ಠಾಣಾ ವ್ಯಾಪ್ತಿಯ ಪಡನ್ನಕ್ಕಾಡ್ ನಲ್ಲಿ ನಡೆದಿದೆ. ಮೃತಪಟ್ಟ ಬೈಕ್ ಸವಾರ ಸಾಫ್ಟ್ ವೇರ್ ಇಂಜಿನಿಯರ್ ಬೇಡಡ್ಕ ತೆಕ್ಕೆಕರೆ…

ನಿಯಂತ್ರಣ ತಪ್ಪಿ ಕಾರು ಪಲ್ಟಿ, ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು..!

ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಕಾಸರಗೋಡಿನ ರಾಣಿಪುರ ಸಮೀಪದ ಪೆರುತ್ತಡಿ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಸುರತ್ಕಲ್ ಎನ್ ಐ ಟಿ ಕೆ ಯ ವಿದ್ಯಾರ್ಥಿ ರಾಯಚೂರು…