ಮಂಗಳೂರು: ಎನ್ಹೆಚ್ಎಂ ಗುತ್ತಿಗೆ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನ ಹಾಗೂ ಇಪಿಎಫ್ ಸೌಲಭ್ಯಕ್ಕೆ ಆಗ್ರಹಿಸಿ ಟಿ.ಎಂ. ಶಹೀದ್ ತೆಕ್ಕಿಲ್’ ರಿಗೆ ಮನವಿ
ಮಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ (ದಕ್ಷಿಣ ಕನ್ನಡ – ಮಂಗಳೂರು) ವತಿಯಿಂದ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ…
ಸುಳ್ಯ:ಬೋರುಗುಡ್ಡೆ ರಸ್ತೆ ದುರಸ್ತಿಗೆ ಆಗ್ರಹಿಸಿ ಎಸ್ಡಿಪಿಐ ನಿಂದ ನಗರಾಭಿವೃದ್ಧಿ ಇಲಾಖೆಗೆ ದೂರು ದಾಖಲು
ಸುಳ್ಯ: ತಾಲೂಕಿನ ಕಸಬಾ ಬೋರುಗುಡ್ಡೆ ಪ್ರದೇಶದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ಹಿಂದೆ ಮನವಿ ಸಲ್ಲಿಸಿದ್ದರು ನಗರ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಬಾರಿ ನೇರವಾಗಿ ನಗರಾಭಿವೃದ್ಧಿ ಇಲಾಖೆಗೆ ಎಸ್ಡಿಪಿಐ ನಾವೂರು ಬ್ರಾಂಚ್ ಕಾರ್ಯದರ್ಶಿ ಮೊಹಮ್ಮದ್ ಸಾಜಿದ್ ರವರು…
ಅರಂತೋಡು: ಬಸ್ ಹತ್ತಲು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ರಿಕ್ಷಾ ಡಿಕ್ಕಿ, ತಲೆಗೆ ಗಾಯ
ಅರಂತೋಡು: ಬಸ್ ಹತ್ತಲು ರಸ್ತೆ ದಾಟುತ್ತಿದ್ದ ನೆಹರೂ ಮೆಮೋರಿಯಲ್ ಕಾಲೇಜು ಅರಂತೋಡು (NMC) ಪಿಯುಸಿ ವಿದ್ಯಾರ್ಥಿ ಸಚಿನ್ ಎಂಬುವವನಿಗೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗೆ ಗಾಯಗಳಾಗಿರುವ ಘಟನೆ ಅರಂತೋಡಿನಲ್ಲಿ ನಡೆದಿದೆ.ವಿದ್ಯಾರ್ಥಿಯು ಬಸ್ ಹತ್ತುವ ಉದ್ದೇಶದಿಂದ ರಸ್ತೆ ದಾಟುತ್ತಿದ್ದಾಗ, ಬರುತ್ತಿದ್ದ…
ಉಮ್ರಾ ಯಾತ್ರೆಗೆ ತೆರಳಲಿರುವ ಕರೀಂ ಪೈಚಾರ್ ಅವರಿಗೆ ಅರಂತೋಡ್ನಲ್ಲಿ ಬೀಳ್ಕೊಡುಗೆ
ಅರಂತೋಡು: ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಅರಂತೋಡು ಫುಟ್ ಪಾಯಿಂಟ್ ಹೋಟೆಲ್ ಮಾಲಕ ಕರೀಂ ಪೈಚಾರ್ ಅವರಿಗೆ, ಅರಂತೋಡು ಕರೀಂ ಅಭಿಮಾನಿಗಳ ಬಳಗದ ವತಿಯಿಂದ ಜುಲೈ 4 ರಂದು ಬೀಳ್ಕೊಡಲಾಯಿತು. ಅರಂತೋಡು ಬಿಜೆಎಂ ಜಮಾತ್ ಅಧ್ಯಕ್ಷರಾದ ಅಶ್ರಫ್ ಗುಂಡಿ ಅವರು ಕರೀಂ…
ಅರಂತೋಡು ಜುಮಾ ಮಸೀದಿ ಖಬರಸ್ತಾನ್ಗೆ ಪಟೇಲ್ ಕುಟುಂಬದಿಂದ ಸೋಲಾರ್ ದೀಪ ಕೊಡಗೆ
ಅರಂತೋಡು: ಇಲ್ಲಿನ ಬದ್ರಿಯಾ ಜುಮಾ ಮಸೀದಿಯ ಖಬರ್ ಸ್ಥಾನಕ್ಕೆ ಮರ್ ಹೂಂ ಹಾಜಿ ಅಹಮ್ಮದ್ ಕುಂಞಿ ಪಟೇಲ್ ಅವರ ಸ್ಮರಣಾರ್ಥವಾಗಿ ಅವರ ಮಕ್ಕಳು ಅಳವಡಿಸಿದ ಸೋಲಾರ್ ದೀಪಗಳ ವ್ಯವಸ್ಥೆಯನ್ನು ಬಹು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ರವರು ಲೋಕಾರ್ಪಣೆಗೊಳಿಸಿದರು. ದೀಪಗಳನ್ನು ಸಾರ್ವಜನಿಕ…
ಅರ್ಜೆಂಟೀನಾಗೆ 3-2 ಅಂತರದ ಪ್ರಯಾಸದ ಜಯ! ಮೆಸ್ಸಿ ಪಡೆಯನ್ನು ಕಾಡಿದ 40 ವರ್ಷದ ವೊಜಿನ್ಹಾ
ಮಿಯಾಮಿಯಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ‘ರೌಂಡ್ ಆಫ್ 32’ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು, ಕೇಪ್ ವರ್ಡೆ ತಂಡದ ವಿರುದ್ಧ 3-2 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿದೆ.ಪಂದ್ಯದ ಮುಖ್ಯಾಂಶಗಳು:
ಕನಕಮಜಲು: ಮುಖ್ಯ ರಸ್ತೆಗೆ ಉರುಳಿದ ಮರ, ವಾಹನ ಸಂಚಾರ ಸ್ತಗಿತ
ಸುಳ್ಯ: ತಾಲೂಕಿನ ಕನಕಮಜಲು ಬಳಿ ಮುಖ್ಯ ರಸ್ತೆಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ರಸ್ತೆಯ ಎರಡೂ ಬದಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ತಗಿತಗೊಂಡಿದೆ.ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಭಾರಿ ಮಳೆ ಮತ್ತು ಗಾಳಿಯ ಅಬ್ಬರಕ್ಕೆ ಮರ ಧರೆಗುರುಳಿದೆ. ಮರ ಅಡ್ಡಲಾಗಿ…
ಸುಳ್ಯ: ಗಾಂಧಿನಗರ ತಿರುವಿನಲ್ಲಿ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಕಾರು; ಓರ್ವರಿಗೆ ಗಾಯ
ಸುಳ್ಯ: ಮಂಗಳೂರಿನಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಹೊಸ ಕಾರೊಂದು ಗಾಂಧಿನಗರದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.ಇಂದು ಖರೀದಿಸಿದ್ದ ಕಾರುಅಪಘಾತಕ್ಕೀಡಾದ ಕಾರನ್ನು ದಂಪತಿಗಳು ಇಂದಷ್ಟೇ ಖರೀದಿಸಿದ್ದರು ಎನ್ನಲಾಗಿದ್ದು, ಮಂಗಳೂರಿನಿಂದ ಮಡಿಕೇರಿ ಕಡೆಗೆ…
ಕ್ರೊಯೇಷಿಯಾ ವಿರುದ್ಧ ಪೋರ್ಚುಗಲ್ ಗೆಲುವು, ದಿವಂಗತ ಡಿಯೊಗೊ ಜೋಟಾಗೆ ರೊನಾಲ್ಡೊ ಅವರಿಂದ ಭಾವುಕ ನಮನ
ಟೊರೊಂಟೊ: ಫೀಫಾ ವಿಶ್ವಕಪ್ 2026ರ ರೋಚಕ ಪಂದ್ಯದಲ್ಲಿ ಪೋರ್ಚುಗಲ್ ತಂಡವು ಕ್ರೊಯೇಷಿಯಾ ವಿರುದ್ಧ 2-1 ಗೋಲುಗಳ ಅಂತರದಿಂದ ರೋಮಾಂಚಕ ಜಯ ಸಾಧಿಸಿದೆ. ಆದರೆ, ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ, ಕ್ರೀಡಾಂಗಣದಲ್ಲಿ ಕಂಡುಬಂದ ಭಾವನಾತ್ಮಕ ಕ್ಷಣಗಳು ಜಗತ್ತಿನಾದ್ಯಂತ ಫುಟ್ಬಾಲ್ ಅಭಿಮಾನಿಗಳ ಹೃದಯ ಗೆದ್ದಿವೆ.ಪಂದ್ಯದ ಅಂತ್ಯದಲ್ಲಿ…
ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್; ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!
ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ…
