ಶಾಂತಿನಗರ: ಹುಬ್ಬುರ್ರಸೂಲ್ ಮೀಲಾದ್ ಫೆಸ್ಟ್- ಮದರಸ ವಿದ್ಯಾರ್ಥಿಗಳ ಪ್ರತಿಭೋತ್ಸವ
ಶಾಂತಿನಗರ ಮುಸ್ಲಿಂ ವೆಲ್ವೇರ್ ಅಸೋಸಿಯೇಷನ್ ರಿ ವತಿಯಿಂದ ನೂರುಲ್ ಇಸ್ಲಾಂ ಮದರಸದಲ್ಲಿ ಹುಬ್ಬುರಸೂಲ್ ಮಿಲಾದ್ ಫೆಸ್ಟ್ ವಿದ್ಯಾರ್ಥಿಗಳ ಪ್ರತಿಭಾ ಸಂಗಮ ಹಾಗೂ ಮೌಲಿದ್ ಪಾರಾಯಣ ಮಜ್ಜಿಸ್ ಸೆ. 29 ರಂದು ನಡೆಯಿತು. ಉದ್ಘಾಟನಾ ಸಮಾರಂಭವನ್ನು ಜಯನಗರ ಜನ್ನತುಲ್ ಉಲೂಂ ಮದರಸದ ಸದರ್…
ಸ.ಪ.ಪೂರ್ವ ಕಾಲೇಜು ಸುಳ್ಯದಲ್ಲಿ ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ‘ಪಶ್ಚಿಮ ಘಟ್ಟಗಳ ಸಂರಕ್ಷಣೆ’ ಕುರಿತು ವಿಚಾರಗೋಷ್ಠಿ ಕಾರ್ಯಕ್ರಮ
ಪರಿಸರ ಉಳಿಸಿ ಹೋರಾಟ ಸ್ವತಃ ಪರಿಸರವನ್ನು ಪ್ರೀತಿಸುವುದರಿಂದ ಆರಂಭವಾಗಲಿ: ಪ್ರಕಾಶ ಮೂಡಿತ್ತಾಯ ಸುಳ್ಯ, ಸೆ.28; ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಗೆ ‘ಪಶ್ಚಿಮ ಘಟ್ಟಗಳ ಸಂರಕ್ಷಣೆ’ ಕುರಿತಾಗಿ ವಿಚಾರಗೋಷ್ಠಿ ಕಾರ್ಯಕ್ರಮ ಸೆಪ್ಟೆಂಬರ್…
ಪ್ರಾಂತೀಯ ಅಧ್ಯಕ್ಷ ಲಯನ್ ಗಂಗಾಧರ ರೈ ಸುಳ್ಯ ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ, ಅಂಗನವಾಡಿ ಕೇಂದ್ರ ಹಾಗೂ ವಿದ್ಯಾರ್ಥಿ ನಿಲಯಕ್ಕೆ ಕೊಡುಗೆ ಸುಳ್ಯ ಲಯನ್ಸ್ ಕ್ಲಬ್‌ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮವು ಸೆ.28 ರಂದು ನಡೆಯಿತು. ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ…
ಬೆಳ್ಳಾರೆ: ಫೇಸ್‌ಬುಕ್ ನಲ್ಲಿ ಮಸೀದಿ ಬಗ್ಗೆ ಅಪಪ್ರಚಾರ- ಖಲೀಲ್ ವಿರುದ್ಧ ಪೋಲಿಸ್ ಕೇಸ್
ಬೆಳ್ಳಾರೆ: ಬೆಳ್ಳಾರೆ ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಘ ಸಂಸ್ಥೆ, ಗುಂಪು, ಪಂಗಡಗಳ, ವಿರುದ್ಧ ತಕರಾರು ಎತ್ತಿ ದ್ವೇಷ ಹರಡಿ ನಿರಂತರ ತೊಡಕುಂಟು ಮಾಡುತ್ತಿರುವ, ಅಲ್ಲದೆ ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್…
ಸುಳ್ಯ – ಅಡ್ಕಬಳೆಯಲ್ಲಿ ಕಾಡಾನೆ ದಾಳಿಗೆ ಕೃಷಿ ನಾಶ
ಕಾಡಾನೆ ದಾಳಿ ಕೃಷಿ ನಾಶವಾದ ಘಟನೆ ಅಡ್ಕಬಳೆಯಲ್ಲಿ ಸಂಭವಿಸಿದೆ.ಗಂಗಾಧರ ಗೌಡ, ಲೀಲಾವತಿ ಎಂಬುವವರ ತೋಟಕ್ಕೆ ಆನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಕೃಷಿ ನಾಶವಾಗಿದೆ ಎಂದು ತಿಳಿದುಬಂದಿದೆ. ಈ ಭಾಗದ ಸಾಮಾನ್ಯ ಸಮಸ್ಯೆ ಇದಾಗಿದ್ದು, ಅರಂತೋಡು ಗ್ರಾಮದ ಅಡ್ಕಬಳೆ ಪರಿಸರದಲ್ಲಿ ಕೃಷಿಕರ…
ಮಂಗಳೂರು : ಕುಲಶೇಖರದಲ್ಲಿ 2 ಬೈಕುಗಳ ಮಧ್ಯೆ ಅಫಘಾತ, ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಹರಿದ ಬಸ್.
ಮಂಗಳೂರು : ಎರಡು ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿದ ವೇಳೆ ಬಸ್ಸೊಂದು ಹರಿದ ಪರಿಣಾಮ ಬೈಕೊಂದರ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಮಂಗಳೂರು ನಗರದ ಕುಲಶೇಖರ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ಚಂದನ್(20) ಎಂದು ಗುರುತಿಸಲಾಗಿದೆ. ಕುಲಶೇಖರ ಸೆಕ್ರೇಡ್…
ಮೂಡನಂಭಿಕೆಯ ಪರಮಾವಧಿ, ಶಾಲಾ ಅಭಿವೃದ್ದಿಗೆ 11 ವರ್ಷದ ವಿದ್ಯಾರ್ಥಿಯ ಬಲಿ ನೀಡಿದ ಆಡಳಿತ ಮಂಡಳಿ..!
ಹತ್ರಾಸ್ : ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನು ಬಲಿ ನೀಡಿದ ಹೇಯಾ ಕೃತ್ಯ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದೆ. ಹೇಯಾ ಕೃತ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಶಾಲೆಯ ಮಾಲಕ, ನಿರ್ದೇಶಕರು, ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ಬಲಿಯಾದ…
ಕೊಲ್ಲಮೊಗ್ರ: ಕೆಲದಿನಗಳ ಹಿಂದೆ ಅಕಾಲಿಕ ಮರಣಹೊಂದಿದ ಅಜಾತಶತ್ರು ಪೋಸ್ಟ್ ಮಾಸ್ಟರ್ ಜಬ್ಬಾರ್- ಆರ್ಥಿಕ ನೆರವು ನೀಡಿದ ಗ್ರಾಮಸ್ಥರು
ಕೊಲ್ಲಮೊಗ್ರ: ಗ್ರಾಮದ ಚಾಳೆಪ್ಪಾಡಿ (ತಂಬಿನಡ್ಕ) ಎಂಬಲ್ಲಿ ನೆಲೆಸಿದ್ದ ಪೋಸ್ಟ್ ಮಾಸ್ಟರ್ ಅಬ್ದುಲ್ ಜಬ್ಬಾರ್ ರವರು ಸೆ.13.ರಂದು ನಿಧನರಾಗಿದ್ದರು. ಅಕಾಲಿಕ ನಿಧನದಿಂದ ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿದ್ದ ಜಬ್ಬಾರ್ ಕುಟುಂಬ ಸ್ಥಬ್ದವಾಗಿತ್ತು. ತಾನು ಬದುಕಿದ್ದಾಗ ಜಾತಿ ಧರ್ಮ ನೋಡದೇ ಇತರರ ನೋವಿನ ಜೊತೆ ಸ್ಪಂದಿಸುತ್ತಿದ್ದ…
ಎನ್ನೆಂಸಿ, ನೇಚರ್ ಕ್ಲಬ್ ವತಿಯಿಂದ “ಫಿಲ್ಲೋಕ್ರೋಮ್- ಎಲೆಗಳಿಂದ ಕಲಾತ್ಮಕತೆ” ಚಿತ್ರಪಟ ರಚನೆ ಸ್ಪರ್ಧೆ
ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಸೆಪ್ಟೆಂಬರ್ 26 ಗುರುವಾರದಂದು “ಫಿಲ್ಲೋಕ್ರೋಮ್- ಎಲೆಗಳಿಂದ ಕಲಾತ್ಮಕತೆ” ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಪಟ ರಚನೆ ಸ್ಪರ್ಧೆ ಆಯೋಜಿಸಲಾಗಿತ್ತು. ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ಉಪಸ್ಥಿತರಿದ್ದು ಸ್ಪರ್ಧಿಗಳಿಗೆ ಶುಭಹಾರೈಸಿದರು.ಕಾಲೇಜಿನ…
ಕಾಸರಗೋಡು : ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ, ಪತಿ ಅರೆಸ್ಟ್
ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕಯ್ಯಾರ್ ಕನ್ನಟಿಪ್ಪಾರೆ ಶಾಂತಿಯೋಡು ನಿವಾಸಿ ಜನಾರ್ಧನ (39) ಬಂಧಿತ. ಪತ್ನಿ ಮಂಗಳೂರು ವಾಮಂಜೂರು ಪಿಲಿಕುಳ ದ ವಿಜೇತ ( 32) ಆಗಸ್ಟ್ 18…
