ಆಲೆಟ್ಟಿ: ಗಾಳಿ-ಮಳೆಗೆ ತೆಂಗಿನಮರ ಬಿದ್ದು ಮನೆಗೆ ಹಾನಿ
ಸುಳ್ಯ ಮಾ.೨೫: ಗುಡುಗು ಸಹಿತ ಗಾಳಿ ಮಳೆಗೆ ಅವಾಂತರ ಹಲವೆಡೆ ಸೃಷ್ಟಿಯಾಗಿದೆ. ಆಲೆಟ್ಟಿಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು, ಪರಿಣಾಮ ತೆಂಗಿನ ಮರ ರಘುನಾಥ ಎಂಬುವವರ ಮನೆಗೆ ಬಿದ್ದು ಮನೆ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.