ಬ್ಯಾಟರಿ ಸರಿ ಇಲ್ಲ.!?? ಸತ್ಯಣ್ಣನ ಬಳಿ ಹೋಗಿ. ಗಾಡಿದ ಹಾರ್ನ್ ಸರಿ ಇಜ್ಜಿ.!? ಸತ್ಯಣ್ಣನಾಡೆ ಪೋಲೆ, ಹೀಗೆ ಎಲ್ಲದ್ದಕ್ಕೂ ಇದ್ದ, ಎಲ್ಲರ ಬಳಿಯೂ ಅತ್ಯಂತ ಸರಳತೆಯಿಂದಿದ್ದ ಸತ್ಯಣ್ಣ ಇನ್ನೂ ಕೇವಲ ನೆನಪು ಮಾತ್ರ,
ಕೆಲ ದಿನಗಳ ಹಿಂದೆ ರಕ್ತದೊತ್ತಡದಿಂದ ಕುಸಿದು ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹಳೆಗೇಟಿನ ಎಲೆಕ್ಟ್ರಿಷಿಯನ್ ಸತ್ಯ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ಅವರು ಕೆಲಸ ಮಾಡುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.