ಪೈಚಾರ್ ಬದ್ರಿಯ ಜುಮಾ ಮಸ್ಜಿದ್ ಹಾಗೂ ಖುವ್ವತ್ತುಲ್ ಇಸ್ಲಾಂ ಮದರಸದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮದರಸ ವಠಾರದಲ್ಲಿ ಆಚರಿಸಲಾಯಿತು.
ಬದ್ರಿಯ ಜುಮಾ ಮಸ್ಜಿದ್ ಇದರ ಖತೀಬರು ಶಮೀರ್ ಅಹ್ಮದ್ ನಹಿಮಿ ದುವಾ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬದ್ರಿಯಾ ಜುಮಾ ಮಸ್ಜಿದ್ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಪಿ. ದ್ವಜಾರೋಹಣ ನೆರವೇರಿಸಿದರು.
ಮದರಸ ಸದರ್ ಮುಅಲ್ಲಿಂ, ಹಂಝ ಝೋಹರಿ, ಮುಅಲ್ಲಿಂರಾದ ಹನೀಫ್ ಮದನಿ ಮಂಡೆಕೋಲು,
ನೌಫಲ್ ಸಹದಿ ಅಡ್ಕಾರ್, ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯ ಮುಜೀಬ್ ಪೈಚಾರ್,
ಸಮಿತಿ ಪ್ರಧಾನ ಕಾರ್ಯದರ್ಶಿ ಹನೀಫ್ ಪಿ ಕೆ ಉಪಾಧ್ಯಕ್ಷ ಇಬ್ರಾಹಿಂ ಎಸ್ ಎ.ಕಾರ್ಯದರ್ಶಿಗಳಾದ ಅಬೂಸಾಲಿ ಕೆಪಿ.ಮನಾಫ್ ಪೈಚಾರ್.ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅಧ್ಯಕ್ಷ ಅಶ್ರಫ್ ಪೈಚಾರ್ ಬದ್ರಿಯ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಸದಸ್ಯರುಗಳು, ಅಲ್ ಅಮೀನ್ ಯೂತ್ ಸೆಂಟರ್ ಇದರ ಸದಸ್ಯರುಗಳು,ಜಮಾಅತ್ ನಿವಾಸಿಗಳು. ವಿದ್ಯಾರ್ಥಿ,ವಿದ್ಯಾರ್ಥಿನಿಗಳು, ಮಕ್ಕಳ ಪೋಷಕರು ಭಾಗವಹಿಸಿದ್ದರು.
ಸ್ವಾತಂತ್ರೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಜೀಬ್ ಪೈಚಾರ್ ಸ್ವಾಗತಿಸಿ ವಂದಿಸಿದರು.