ಪೈಚಾರ್: ಇಲ್ಲಿನ ಕುಂಬರ್ಚೋಡುವಿನಲ್ಲಿರುವ ಪೀಸ್ ಸ್ಕೂಲ್ ನಲ್ಲಿ ೭೮ ನೇ ಸಡಗರದ ಸ್ವಾತಂತ್ರ್ಯ ದಿನಾಚರಣೆಯನ್ನು ಆರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಕೆ. ಅಬೂಬಕರ್ ಧ್ವಜಾರೋಹಣ ನೆರವೇರಿಸಿದರು. ಪ್ರಾಂಶುಪಾಲರಾದ ಮುಹಮ್ಮದ್ ಸೈಫುಲ್ಲ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಮಹತ್ವವನ್ನು ವಿವರಿಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಗೇ ಸ್ವಾತಂತ್ರ್ಯ ಕುರಿತು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಯಿತು. ೮ನೇ ತರಗತಿಯ ಇಬ್ರಾಹಿಂ ಕಲೀಲ್ ಕುರ್ಆನ್ ಪಠಿಸಿದರು. ವಿದ್ಯಾರ್ಥಿನಿಗಳಾದ ಸಲ್ವಾ ಮತ್ತು ಸೋಹ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಸಂಶುದ್ದೀನ್ ಹಾಗೂ ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.