ಮಂಗಳೂರು: ಸಮರ್ಪಣೆ,ಬದ್ಧತೆ ಮತ್ತು ಕಠಿಣ ಪರಿಶ್ರಮ ಇಫ್ತಿಕಾರ್ ಯಶಸ್ಸಿನ ನ್ಯಾಷನಲ್ ಕಮಿಷನ್ ಫಾರ್ ಅಲೈಡ್ & ಹೆಲ್ತ್ ಕೇರ್ ಸೈನ್ಸ್ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ನೇಮಕಗೊಂಡ ಡಾ. ಯು. ಟಿ. ಇಫ್ತಿಕಾರ್ ಫರೀದ್ ರವರಿಗೆ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು ಸನ್ಮಾನಿಸಿದ ಯೇನೆಪೋಯ ಡೀಮ್ಡ್ ಯೂನಿವರ್ಸಿಟಿ ಯ ಚಾನ್ಸ್ ಲರ್ ವೈ. ಅಬ್ದುಲ್ಲ ಕುಂಞ ಪ್ರಾಮಾಣಿಕ ಸಮಾಜ ಮುಖಿ ವ್ಯಕ್ತಿಗಳಿಗೆ ಸಮಾಜದ ಮನ್ನಣೆ ಸಿಗುತ್ತದೆ ಎಂಬುದಕ್ಕೆ ಡಾ. ಇಫ್ತಿಕಾರ್ ಉದಾಹರಣೆ ಎಂದರು
ಅಧ್ಯಕ್ಷತೆ ಯನ್ನು ಸಂಸ್ಥೆಯ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ವಹಿಸಿದ್ದರು.
ಮುಖ್ಯ ಅತಿಥಿ ಗಳಾಗಿ ಎಸ್ಎಂಆರ್ ಗ್ರೂಪ್ಸ್ ಎಂಡಿ ರಶೀದ್ ಹಾಜಿ, ಉದ್ಯಮಿಗಳಾದ ಮುಸ್ತಫ, ಮನ್ಸೂರ್ ಅಜಾದ್, ಕಾರ್ಪೋರೇಟರ್ ಎ. ಸಿ. ವಿನಯರಾಜ್, ಭಾಗವಹಿಸಿದ್ದರು.
ವೇದಿಕೆಯಲ್ಲಿ ಮೀಫ್ ಗೌರವಾಧ್ಯಕ್ಷ ಉಮರ್ ಟೀಕೇ, ಮುಖ್ಯ ಸಲಹೆ ಗಾರ ಸಯ್ಯದ್ ಬ್ಯಾರಿ, ಮೀಫ್ ಪದಾಧಿಕಾರಿಗಳಾದ ಮಮ್ತಾಜ್ ಅಲಿ, ಮುಸ್ತಫ ಸುಳ್ಯ, ಶಬೀ ಖಾಝಿ ಉಡುಪಿ, ರಿಯಾಜ್ ಕಣ್ಣೂರು, ನಿಝರ್ ಕೋಸ್ಟಲ್ ಮೊದಲಾದವರು ಉಪಸ್ಥಿತರಿದ್ದರು
ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು