ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿಗೆ OSAAT ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ನಾಲ್ಕು ಕೊಠಡಿಗಳು ಹಾಗು ಶೌಚಾಲಯಗಳ ಕುರಿತಂತೆ ಚರ್ಚಿಸಲು ಸಭೆಯು ದಿನಾಂಕ10.10.2024 ರ ಗುರುವಾರ ನಡೆಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಾರ್ದನ ಮಾಸ್ಟರ್ ಗಣಿತ ಕೇಂದ್ರ(ರಿ.)

ಸುಳ್ಯ ಇದರ ಅಧ್ಯಕ್ಷರಾದ ಎಂ.ಬಿ.ಸದಾಶಿವ, ಉಪಾಧ್ಯಕ್ಷರಾದ ಡಾ. ರಂಗಯ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಧಾಕರ ರೈ, ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಗಳಾದ ಸುಧಾಕರ, ಕಾಲೇಜು ಅಭಿವೃದ್ದಿ ಸಮಿತಿ ಕೋಶಾಧಿಕಾರಿಗಳಾದ ಲಿಂಗಪ್ಪ ಗೌಡ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪುಟ್ಟಣ್ಣ, ರೇಖಾ, ಲೋಕೇಶ್ ಗುಡ್ಡೆಮನೆ, ಪ್ರಾಂಶುಪಾಲರಾದ ಮೋಹನ್ ಗೌಡ, ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ, ಶಿಕ್ಷಕರಾದ ಪೂರ್ಣಿಮಾ, ದಿವಾಕರ್ ಉಪಸ್ಥಿತರಿದ್ದರು. ಕಟ್ಟಡ ಕಟ್ಟುವ ಸ್ಥಳ, ಕಟ್ಟಡದ ಪ್ಲಾನ್ ಅಂತಿಮಗೊಳಿಸುವಿಕೆ, ಅನುಸರಿಸಬೇಕಾದ ಪ್ರಕ್ರಿಯೆಗಳು, ಪರ್ಯಾಯ ವ್ಯವಸ್ಥೆಗಳು ಇವುಗಳ ಬಗ್ಗೆ ಚರ್ಚಿಸಲಾಯಿತು. ಮುಂದಿನ ವರ್ಷ ನಡೆಯಲಿರುವ ಸಂಸ್ಥೆಯ ಅಮೃತ ಮಹೋತ್ಸವಕ್ಕೆ OSAAT ನವರ ಈ ಯೋಜನೆ ಉತ್ತಮ ಚಾಲನೆ ನೀಡಿದ್ದು ದಾನಿಗಳ ಸಹಾಯದಿಂದ ಒಟ್ಟು ಎಂಟು ಕೊಠಡಿಗಳ ನಿರ್ಮಾಣಕ್ಕೆ ಶ್ರಮಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

Leave a Reply

Your email address will not be published. Required fields are marked *