SSF ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವವು ಅಕ್ಟೋಬರ್ 20 ಆದಿತ್ಯವಾರ ತೆಕ್ಕಿಲ್ ಆಡಿಟೋರಿಯಂ ಅರಂತೋಡು ನಲ್ಲಿ ನಡೆಯಿತು, ಬೆಳಗ್ಗೆ 8:30 ಕ್ಕೆ ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಹಾಗೂ KPCC ಪ್ರಧಾನ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಿದರು, ನಂತರ ಉದ್ಘಾಟನಾ ಕಾರ್ಯಕ್ರಮ ನಡೆಯಿತು, ಸುಳ್ಯ ಸೆಕ್ಟರ್ ಕೋಶಾಧಿಕಾರಿ ರುನೈಝ್ ಕೊಯನಾಡು ಸರ್ವರನ್ನು ಸ್ವಾಗತಿಸಿದರು, ಉದ್ಘಾಟನೆ ಯನ್ನು KPCC ಪ್ರಧಾನ ಕಾರ್ಯದರ್ಶಿ ಹಾಗೂ ತೆಕ್ಕಿಲ್ ಅನುಷ್ಠಾನ ಸ್ಥಾಪಕ ಅಧ್ಯಕ್ಷ ಟಿ ಎಂ ಶಹೀದ್ ರವರು ತಮ್ಮ ಭಾಷಣದಲ್ಲಿ ಸಾಹಿತ್ಯೋತ್ಸವ ವಿದ್ಯಾರ್ಥಿ ಪ್ರತಿಭೆಯನ್ನು ಪತ್ತೆ ಹಚ್ಚಿ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಹಾಗೂ ಸಂಘಟನೆಯ ಶಿಸ್ತು ಬದ್ಧತೆಯನ್ನು ಶ್ಲಾಘಿಸುತ್ತದೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು, ಸುಳ್ಯ ಸೆಕ್ಟರ್ ಅಧ್ಯಕ್ಷ ಮಸೂದ್ ಹಿಮಮಿ ಪ್ರಾಸ್ತಾವಿಕ ಮಾತನಾಡಿದರು, ಸೆಕ್ಟರ್ ಸಾಹಿತ್ಯೋತ್ಸವ ಚೇರ್ಮನ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಸಿದ್ದೀಕ್ ಕಟ್ಟೆಕಾರ್, ಶಾಫಿ ಪ್ರಗತಿ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಪಿ ಜಿ, ಹಾಗೂ ನೌಶಾದ್ ಕೆರೆಮೂಲೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು