ಸುಳ್ಯ: ಸುಳ್ಯ ರೇಂಜ್’ನ ಪ್ರತಿಭಾ ಸಂಗಮ, ಆಫ್ ಸ್ಟೇಜ್ ಪ್ರೋಗ್ರಾಂ ಅನ್ಸಾರಿಯ ಕ್ಯಾಂಪಸ್ ನಲ್ಲಿ ಅಕ್ಟೋಬರ್ 19 ರಂದು ನಡೆಯಿತು.
ಕಾರ್ಯಕ್ರಮಕ್ಕೆ ಸಿರಾಜುದ್ದೀನ್ ಸಖಾಫಿ ಗಾಂಧಿನಗರ ದುಆ ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆ:ಎಸ್ ಎಂ ಅಬೂಬಕ್ಕರ್ ಮುಸ್ಲಿಯಾರ್ ವಹಿಸಿದರು. ನಿಝಾರ್ ಸಖಾಫಿ ಗಾಂಧಿನಗರ ಸ್ವಾಗತಿಸಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ಹಾಫಿಳ್ ಹಾಮಿದ್ ಹಿಮಮಿ ಸಖಾಫಿ ನೆರವೇರಿಸಿದರು. ವೇದಿಕೆಯಲ್ಲಿ ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಅಬ್ದುಲ್ ಲತೀಫ್ ಹರ್ಲಡ್ಕ, ಎಸ್ ಪಿ ಅಬೂಬಕ್ಕರ್, ಸಿದ್ದೀಕ್ ಕಟ್ಟೆಕ್ಕಾರ್, ಇಕ್ಬಾಲ್ ಎಲಿಮಲೆ, ವ್ಯವಸ್ಥಾಪಕರು ಉವೈಸ್ ಹಾಗೂ ರೇಂಜ್ ನಾಯಕರುಗಳು ಇದ್ದರು.
ಕಾರ್ಯಕ್ರಮದ ಸಂದೇಶ ಭಾಷಣವನ್ನು ಪ್ರತಿಭಾ ಸಂಗಮ ಕನ್ವೀನರ್ ಸಿರಾಜುದ್ದೀನ್ ಸಖಾಫಿ ಗಾಂಧಿನಗರ ಸಾರಿದರು. ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಧನ್ಯವಾದವನ್ನಿತ್ತರು.