ಸುಳ್ಯ : ಅರಂತೋಡು ಎಮಿರೇಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಅರಂತೋಡು ಇದರ ಆಶ್ರಯದಲ್ಲಿ 30 ಗಜಗಳ ಏಳು ಜನರ ಮುಕ್ತ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟವು ಅ.20 ರಂದು ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಪ್ ಗುಂಡಿ ಉದ್ಘಾಟಿಸಿದರು. ಎಮಿರೇಟ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮನ್ಸೂರ್ ಪಾರೆಕ್ಕಲ್ ಅಧ್ಯಕ್ಷತೆ ವಹಿಸಿದರು. ಸುಮಾರು 35 ತಂಡಗಳು ಭಾಗವಹಿಸಿದ ಕ್ರಿಕೆಟ್ ಪಂದ್ಯಾಟದಲ್ಲಿ ಬ್ರದರ್ಸ್ ಬಾಕಿಲ ಪ್ರಥಮ ಸ್ಥಾನ ಪಡೆದು ರೂ.15000 ಮತ್ತು ಟ್ರೋಪಿಯನ್ನು ತನ್ನದಾಗಿಸಿದರೆ, ದ್ವೀತೀಯ ಸ್ಥಾನಿ ಕಿಂಗ್ ಉಬರಡ್ಕ ರೂ.10000 ಬಹುಮಾನ ಮತ್ತು ಟ್ರೋಪಿಯನ್ನು ಪಡೆದುಕೊಂಡಿತು.
ಸಂಜೆ ನಡೆದ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ನೆರವೇರಿಸಿ ಎಮಿರೇಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಶಿಸ್ತು ಬದ್ದ ಸಂಘಟನೆಯಾಗಿದ್ದು, ಯುವಕರು ಆಟೋಟ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಸ್ವಾವಲಂಬಿಗಳಾಗಬೇಕೆಂದರು.
ಪಂದ್ಯಾಟದಲ್ಲಿ ವಿಜೇತರಿಗೆ ಬಹುಮಾನವನ್ನು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಾಜಿ ವಿತರಿಸಿ ಶುಭಹಾರೈಸಿದರು. ಇದೇ ಸಂಧರ್ಭದಲ್ಲಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜ್ ನ ನಿವೃತ್ತ ದೈಹಿಕ ಶಿಕ್ಷಕ ಎ.ಸಿ. ವಸಂತ, ಪ್ರಗತಿಪರ ಕೃಷಿಕರು ತೀರ್ಥರಾಮ ಪರ್ನೋಜಿ ಉಳುವಾರು, ಸುಳ್ಯ ಜಮೀಯತ್ತುಲ್ ಫಲಾಹ್ ಅಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಸುಳ್ಯ ನಗರ ಪಂಚಾಯತ್ ಸದಸ್ಯ ಸಿದ್ಧೀಕ್ ಕೊಕ್ಕೊ, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಹಬೀಬ್ ಗುಂಡಿ, ಜಾವೇದ್ ಪೆಲ್ತಡ್ಕ, ಗೂನಡ್ಕ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಸಾಜಿ ಐ.ಜಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಮೀರ್ ಕುಕ್ಕುಂಬಳ ಭಾಗವಹಿಸಿದರು. ಅಧ್ಯಕ್ಷತೆಯನ್ನು ಮನ್ಸೂರ್ ಪಾರೆಕ್ಕಲ್ ವಹಿಸಿದ್ದರು. ಸಂಚಾಲಕ ಅಬ್ದುಲ್ ಮಜೀದ್, ಜಾವೇದ್ ಪಾರೆಕ್ಕಲ್, ಮುನೀರ್ ಸೆಂಟ್ಯಾರ್, ಅಶ್ರೀದ್ ಗುಂಡಿ, ಸುಹೈಲ್ ಅರಂತೋಡು ಆಬಿದ್ ಇಕ್ಬಾಲ್, ಕಬೀರ್ ಸೆಂಟ್ಯಾರ್, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಸ್ವಾಗತಿಸಿ ತಾಜುದ್ಧೀನ್ ಅರಂತೋಡು ವಂದಿಸಿದರು. ಪುರುಷೋತ್ತಮ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.