(Namma sullia): SSF ತನ್ನ ಸಮಾಜಮುಖಿ ಕಾರ್ಯಾಚಟುವಟಿಗಳ ಮೂಲಕ ಮನೆಮಾತಾಗಿರುವ ಸುನ್ನಿ ವಿದ್ಯಾರ್ಥಿ ಸಂಘಟನೆ ಇದು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನದ ಭಾಗವಾಗಿ ಕಳೆದ 2 ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಸಾಹಿತ್ಯೋತ್ಸವ ಶೀರ್ಷಿಕೆಯ ಪ್ರತಿಭೆಗಳ ಉತ್ಸವಕ್ಕೆ ಕರುನಾಡು ಸಜ್ಜಾಗಿದೆ.

ಭಾಷಣ, ಬರಹ ಮತ್ತು ಗಾಯನ ಸೇರಿದಂತೆ 4 ವಿಭಾಗಗಳಾಗಿ 108 ಕ್ಕೂ ಹೆಚ್ಚಿನ ಸ್ಪರ್ಧೆಗಳ ಮೂಲಕ ಯುವ ಪ್ರತಿಭೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ, ಶಾಖೆ ಸೆಕ್ಟರ್,ಡಿವಿಷನ್, ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಸ್ತರದಲ್ಲಿ ಹಂತ-ಹಂತವಾಗಿ ನಡೆಯುವ ಈ ಸಾಹಿತ್ಯೋತ್ಸವಕ್ಕೆ SSF ಮಡಂತ್ಯಾರ್ ಸೆಕ್ಟರ್ ಅನಿಯಾಗಲಿದೆ. ಇದೇ ಬರುವ ಅಕ್ಟೋಬರ್ 27 ರ ಆದಿತ್ಯವಾರ ಹಯಾತುಲ್ ಔಲಿಯರಿಂದ ಪುಲಕಿತಗೊಂಡ ಕಾವಳಕಟ್ಟೆಯ ಮಣ್ಣಿನಲ್ಲಿ ಸುನ್ನಿ ಉಲಮಾ ವಿದ್ವಾಂಸರ ಪೈಕಿ ಓರ್ವರಾದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷರಾಗಿರುವ ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ರವರ ನೇತೃತ್ವದ ಅಲ್-ಖಾದಿಸ ಕ್ಯಾಂಪಸ್ SSF ಮಡಂತ್ಯಾರು ಸೆಕ್ಟರ್ ಸಾಹಿತ್ಯೋತ್ಸವ 2024 ಕ್ಕೆ ಸಾಕ್ಷಿಯಾಗಲಿದೆ. ಸಾಹಿತ್ಯೋತ್ಸವ ಸಮಿತಿ ನಾಯಕರುಗಳಾದ ಛೇರ್ಮನ್ ಅಬ್ದುಲ್ ರಶೀದ್ ಮಾಲಾಡಿ, ಜನರಲ್ ಕನ್ವಿನರ್ ಹಾರಿಸ್ ಪಾಂಡವರಕಲ್ಲು, ಕೋಶಾಧಿಕಾರಿ ಹಾಶಿಮ್ ಸಅದಿ ನೇತೃತ್ವದ ತಂಡದಿಂದ ಕಾರ್ಯಕ್ರಮದ ಯಶಸ್ವಿಗೆ ಬೇಕಾಗಿ ಚುರುಕಿನ ಕಾರ್ಯಾಚರಣೆ ಆರಂಭಗೊಂಡಿದೆ.

ಅತ್ಯಂತ ಅದ್ದೂರಿಯಾಗಿ ಜರುಗಳಿರುವ ಪ್ರತಿಭೆಗಳ ಉತ್ಸವದಲ್ಲಿ ಮಡಂತ್ಯಾರು ಸೆಕ್ಟರ್ ವ್ಯಾಪ್ತಿಯ 08 ಶಾಖೆಗಳ ಸರಿಸುಮಾರು 200 ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಲಿದ್ದಾರೆ. ಐತಿಹಾಸಿಕವಾಗಿ ನಡೆಯಲಿರುವ SSF ಮಡಂತ್ಯಾರು ಸೆಕ್ಟರ್ ಸಾಹಿತ್ಯೋತ್ಸವವನ್ನು ಖ್ಯಾತ ಸುನ್ನಿ ವಿದ್ವಾಂಸ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷರು ಅಲ್-ಖಾದಿಸ ಸಂಸ್ಥೆಯ ಸಂಚಾಲಕರು ಆಗಿರುವ ಡಾ. ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ರವರು ಉಧ್ಘಾಟಿಸಲಿದ್ದಾರೆ. ಸೆಕ್ಟರ್ ಅಧ್ಯಕ್ಷರಾದ ನೌಷದ್ ಸಖಾಫಿ ಅಲ್ – ಮುಈನಿಯವರ ಘನಅಧ್ಯಕ್ಷತೆಯಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಕರ್ನಾಟಕ ಜಂಮಿಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿಯಾಗಿರುವ SP ಹಂಝ ಸಖಾಫಿ ಬಂಟ್ವಾಳ್, ಕರ್ನಾಟಕ ಮುಸ್ಲಿಂ ಜಮಾಅತ್ ಸೆಂಟರ್ ಅಧ್ಯಕ್ಷರಾಗಿರುವ ಅಸ್ಸಯ್ಯದ್ ಅಬ್ದುಲ್ ಸಲಾಂ ತಂಙಳ್ ಸೇರಿದ ಇನ್ನಿತರ ಉಲಮಾ ಉಮರ ನೇತಾರರು ಭಾಗವಹಿಸಲಿದ್ದಾರೆ ಎಂದು SSF ಮಡಂತ್ಯಾರ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಾಝಿಕ್ ಮಾಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *