ನೆಹರು ಮೆಮೋರಿಯಲ್ ಕಾಲೇಜು ಸುಳ್ಯದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ‘ದೀಪಾವಳಿ ವಿಥ್ ಮೈ ಭಾರತ್’ ಕಾರ್ಯಕ್ರಮದ ಅಂಗವಾಗಿ ಸುಳ್ಯ ವರ್ತಕರ ಸಂಘದ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಅಕ್ಟೋಬರ್ 30ರಂದು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ. ನಂದಕುಮಾರ್, ಸ್ವಚ್ಛತೆ ಕುರಿತಾಗಿ ಮತ್ತು ಮಾಲಿನ್ಯದಿಂದ ಬರುವ ಆರೋಗ್ಯದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ವರ್ತಕ ಸಂಘದ ಅಧ್ಯಕ್ಷರಾದ ಸುಧಾಕರ ರೈಯವರು ಸ್ವಚ್ಛತೆಯ ಅಗತ್ಯತೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಬ್ದುಲ್ ರೆಹಮಾನ್ ಕಾರ್ಯದರ್ಶಿ ವರ್ತಕರ ಸಂಘ ಸುಳ್ಯ, ಪ್ರಭಾಕರನ್ ನಾಯರ್ ನಿರ್ದೇಶಕರು ವರ್ತಕರ ಸಂಘ ಸುಳ್ಯ, ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಚಿತ್ರಲೇಖ ಕೆ ಎಸ್, ಹರಿಪ್ರಸಾದ್ ಅತ್ಯಾಡಿ ಉಪಸ್ಥಿತರಿದ್ದರು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೆವಿಜಿ ಸರ್ಕಲ್ ನಿಂದ ಪ್ರಾರಂಭಗೊಂಡು ಕೋರ್ಟ್ ರಸ್ತೆ, ಶಿಕ್ಷಣಾಧಿಕಾರಿಗಳ ಕಚೇರಿ, ಟೌನ್ ಹಾಲ್, ವಿದ್ಯುತ್ ಇಲಾಖೆ ಮುಂಭಾಗದವರೆಗೆ ಕಸ ಹೆಕ್ಕಿ ಶುಚಿ ಗೊಳಿಸಲಾಯಿತು.

Leave a Reply

Your email address will not be published. Required fields are marked *