ಸುಳ್ಯ : ಮೂಲತಃ ಕೇರಳ ವಯನಾಡ್ ಜಿಲ್ಲೆಯ ನಿವಾಸಿ. ಸುಳ್ಯದಲ್ಲಿ ಹಲವಾರು ವರ್ಷದಿಂದ ಪ್ಲಂಬರ್ ವೃತ್ತಿ ನಿರ್ವಹಿಸುತ್ತಿದ್ದ, ಹವ್ಯಾಸಿ ಬ್ಯಾಡ್ಮಿಂಟನ್ ಆಟಗಾರ ಸಲೀತ್ ಅಹಮ್ಮದ್ (38) ನಿನ್ನೆ (ನವೆಂಬರ್ 01) ರಾತ್ರಿ ಬ್ಯಾಡ್ಮಿಂಟನ್ ಆಟದ ನಂತರ ಆಯಾಸ ಗೊಂಡು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಎಂದಿನಂತೆ ಇಂದು ಕೂಡ ಕುರುಂಜಿ ಗುಡ್ಡೆ ಬಳಿಯಿರುವ ಒಳಾಂಗಣ ಶಟ್ಲ್ ಬ್ಯಾಡ್ಮಿಂಟನ್ ಮೈದಾನದಲ್ಲಿ ಆಟ ಆಡುತ್ತಿದ್ದರು, ಇದ್ದಕಿದ್ದಂತೆ ಆಯಸಗೊಂಡ ಮೃತ ಸಲೀತ್, ತನಗೆ ಆಯಾಸೊಳ್ಳುವುದೆಂದು ತನ್ನನ್ನು ಮನೆಗೆ ಕರೆತರಲು ಇತರರ ಜೊತೆ ಕೇಳಿಕೊಳ್ಳುತ್ತಾರೆ, ಅಷ್ಟರಲ್ಲಿಯೇ ಇತರ ಆಟಗಾರರು ಆತನನ್ನು, ಕೆವಿಜಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು, ಆಸ್ಪತ್ರೆಯ ಒಳಪ್ರವೇಶಿಸುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತನ್ನ ವೃತ್ತಿ ಸೇವೆಯಲ್ಲಿ ಜನಾನುರಾಗಿದ್ದರು. ಪತ್ನಿ ಸಾಹಿನ ಮತ್ತು ಇಬ್ಬರು ಹೆಣ್ಣು ಮಕ್ಕಳಾದ ಲಿಹಾ ಮೆಹ್ರೀನ್, ಲನಾ ಮೆಹ್ರೀನ್,ಹಾಗೂ ಅಪಾರ ಮಿತ್ರವೃಂದ ವನ್ನು ಅಗಲಿದ್ದಾರೆ. ಹುಟ್ಟೂರಾದ ವಯನಾಡ್ ದಫನ ಕಾರ್ಯ ನಡೆಯಲಿದೆ.