ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕನೋರ್ವ ಮುಳುಗಿ ಜಲ ಸಮಾಧಿಯಾಗಿರುವ ಘಟನೆ ಇಂದು ಸಂಜೆ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ. ಎಮ್ಮೆಮಾಡುವಿನ ಅನೀಫ್ ಎಂಬುವವರ ಮಗ ಉವೈಸ್ (13) ಎಂಬಾತ ಮೃತ ದುರ್ದೈವಿ. ಸ್ನೇಹಿತರೊಂದಿಗೆ ಆಟವಾಡಲೆಂದು ತೆರಳಿದ್ದಾಗ ಸ್ನಾನಕ್ಕೆಂದು ಕಾವೇರಿ ನದಿಗೆ ಇಳಿದಾಗ ಉವೈಸ್ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾನೆ. ಸಂಜೆವರೆಗೂ ಸ್ಥಳೀಯರು, ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಗಳು ಮೃತ ದೇಹದ ಹುಡುಕಾಟ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಕತ್ತಲಾದ ಕಾರಣ ಮತ್ತು ವಿಪರೀತ ಮಳೆಯಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ನಾಳೆ ಬೆಳಿಗ್ಗೆ ಶೋಧ ಕಾರ್ಯ ಮುಂದುವರೆಯಲಿದೆ.