ಸುಳ್ಯ ಪೊಲೀಸರಿಂದ ಇತ್ತೀಚೆಗೆ ಕಳ್ಳನೊಬ್ಬ ತಪ್ಪಿಸಿಕೊಂಡು ಭಾರಿ ಸುದ್ದಿಯಾಗಿತ್ತು. ಇದೀಗ ಮತ್ತೋರ್ವ ಕಳ್ಳ ಮೈಸೂರು ಪೊಲೀಸರ ಕೈನಿಂದ ಸುಳ್ಯದಲ್ಲಿ ತಪ್ಪಿಸಿಕೊಂಡು ಬಳಿಕ ಸಿಕ್ಕಿಹಾಕಿಕೊಂಡ ಘಟನೆ ಭಾನುವಾರ ನ.3 ರಂದು ಸಂಜೆ ನಡೆದಿದೆ ಎಂದು ತಿಳಿದು ಬಂದಿದೆ.

ಖಾತೆ ಹ್ಯಾಕ್ ಮತ್ತು ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಹೊತ್ತುಕೊಂಡಿರುವ ಕಳ್ಳನೊಬ್ಬನನ್ನು ಮೈಸೂರು ಕ್ರೈಂ ಪೊಲೀಸರು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಸುಳ್ಯ ಮಾರ್ಗವಾಗಿ ಪೊಲೀಸರು ತೆರಳುತ್ತಿದ್ದ ಸಂದರ್ಭದಲ್ಲಿ ಓಡಬಾಯಿ ಸಮೀಪ ಚಹಾ ಕುಡಿಯಲು ನಿಲ್ಲಿಸಿದ್ದಾರೆ. ಕಳ್ಳ ಕೂಡ ಇವರೊಂದಿಗೆ ಚಹಾ ಸವಿದು, ತಿಂಡಿಯು ಕೂಡಾ ತಿಂದಿದ್ದಾನೆ, ಕೈತೊಳೆಯಲು ಹೋದ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಎಲ್ಲರೂ ಜೋರಾಗಿ ಕಿರುಚಿಕೊಳ್ಳುತ್ತಿರುವಾಗಲೇ ಈತ ಹೋಟೆಲ್ ನಿಂದ ಹಿಂದೆ ಇದ್ದ ಪಯಸ್ವಿನಿ ನದಿಗೆ ಹಾರಿ ದೊಡ್ಡೇರಿ ಕಡೆಗೆ ಓಡಿದ್ದಾನೆ. ಬಟ್ಟೆಯಲ್ಲಿ ಕೆಸರು ನೀರು ಆಗಿರುವುದನ್ನು ಕಂಡು ಹತ್ತಿರದ ಮನೆಯವರಿಗೆ ಆತನ ಬಗ್ಗೆ ಸಂಶಯ ಬರುತ್ತದೆ. ಆತನನ್ನು ಕೆಲವು ಯುವಕರು ಆತನನ್ನು ಹಿಡಿದು ವಿಚಾರಿಸಿದಾಗ ಪೊಲೀಸರ ಕೈನಿಂದ ತಪ್ಪಿಸಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಈ ಸಮಯ ಮೈಸೂರು ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.

Leave a Reply

Your email address will not be published. Required fields are marked *