ಸುಳ್ಯ : ಉಬರಡ್ಕ ರಸ್ತೆಯ ಸೂಂತೋಡು ಸಮೀಪ KSRTC ಬಸ್ ಡೀಪೊ ಬಳಿ ಸರಕಾರಿ ಬಸ್ಸು ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಓರ್ವಳು ಮೃತಪಟ್ಟ ಘಟನೆ ವರದಿಯಾಗಿದೆ.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ರಚನಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು.
ನಾರಾಯಣ ಕಾಡುತೋಟ ಮತ್ತು ರಾಜೇಶ್ವರಿ ದಂಪತಿಯ ಹಿರಿಯ ಪುತ್ರಿಯಾಗಿರುವ ರಚನಾ ಸುಳ್ಯ ಜೂನಿಯರ್ ಕಾಲೇಜ್ ವಿದ್ಯಾರ್ಥಿನಿಯಾಗಿರುವ ತಂಗಿ ಅನನ್ಯ ಅವರನ್ನು ಕರೆದೊಯ್ಯಲು ಸುಳ್ಯಕ್ಕೆ ಬಂದಿದ್ದರು. ಅನನ್ಯ ಸಂಜೆ ತರಗತಿ ಮುಗಿದ ಬಳಿಕ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಅಭ್ಯಾಸಕ್ಕೆಂದು ನಿಂತಿದ್ದಳು. ಆಕೆಯನ್ನು ಕರೆದೊಯ್ಯಲು ಹೋಗಿದ್ದ ರಚನಾ ತಂಗಿಯೊಂದಿಗೆ ವಾಪಾಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ರಚನಾ ಕೂಡಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಶೈಕ್ಷಣಿಕವಾಗಿ ಉನ್ನತ ಶ್ರೇಣಿ ಪಡೆದುಕೊಂಡಿದ್ದರು. ಕ್ರೀಡೆಯಲ್ಲೂ ಮುಂದಿದ್ದ ಈಕೆ ಯಕ್ಷಗಾನ ಕಲಾವಿದೆಯೂ ಕೂಡ ಹೌದು.
ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಬರೆದು ಉತೀರ್ಣರಾಗಿದ್ದ ರಚನಾ ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದರು.
ಸ್ಕೂಟಿಯಲ್ಲಿದ್ದ ಸವಾರರಿಬ್ಬರಿರಲ್ಲಿ ಒಬ್ಬರು ವಿಧ್ಯಾರ್ಥಿನಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತ ವಿದ್ಯಾರ್ಥಿನಿಯನ್ನು ಪುತ್ತೂರು ವಿವೇಕಾನಂದ ಕಾಲೇಜು ದ್ವಿತೀಯ ವರ್ಷದ ವಿಧ್ಯಾರ್ಥಿನಿ ರಚನ ಎಂದು ತಿಳಿದುಬಂದೆ. ರಚನಾ ನಾರಾಯಣ ಕಾಡುತೋಟ ಇವರ ಪುತ್ರಿ. ಆಸ್ಪತ್ರೆಗೆ ಈಗಾಗಲೇ ಊರವರು, ಬಂಧು ಮಿತ್ರರು ಆಗಮಿಸಿದ್ದು ಕಂಬನಿ ಮಿಡಿದಿದ್ದಾರೆ.
ಮೃತ ರಚನಾ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಕಾಡುತೋಟ ಮನೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.