ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ 18 ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಕಾರ್ಯಕ್ರಮ ಮತ್ತು ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ನ. 24 ರಂದು ನಡೆಯಿತು.

ಈ ಕಾರ್ಯಕ್ರಮದ ಅಂಗವಾಗಿ ಸಂಜೆ ಅಸರ್ ನಮಾಝ್ ಬಳಿಕ ದಫ್ ರ್ಯಾಲಿಯು ಮೊಗರ್ಪಣೆ ಮಸೀದಿ ವಠಾರದಿಂದ ಸಾಗಿ ಬಂದು ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ ನೂತನ ಕಛೇರಿ ಬಳಿ ಸಮಾಪ್ತಿಗೊಂಡಿತು.

ಆಕರ್ಶಕ ಧಫ್ ರ್ಯಾಲಿಗೆ ಮೊಗರ್ಪಣೆ ದರ್ಗಾ ಝೀಯಾರತ್ ಮೂಲಕ ದುಆಃ ನೇತೃತ್ವ ವಹಿಸಿ ಮೊಗರ್ಪಣೆ ಜುಮಾ ಮಸೀದಿಯ ಖತೀಬ್ ಹಾಫಿಲ್ ಶೌಕತ್ ಅಲಿ ಸಖಾಫಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಲ್ ಅಮೀನ್ ಯೂತ್ ಸೆಂಟರ್ ನ ನೂತನ ಕಛೇರಿ ಉದ್ಘಾಟನೆಯನ್ನು ಉದ್ಯಮಿ ಹಾಗೂ ಸಮಾಜ ಸೇವಕ ಅಬ್ದುಲ್ ರಹಮಾನ್ ಸಂಕೇಶ್ ರವರು ನೂತನ ಕಛೇರಿಯನ್ನು ಉದ್ಘಾಟಿಸಿದರು.

ನಂತರ ವೇದಿಕೆಯಲ್ಲಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಿತು. ಹಲವು ಪ್ರದೇಶಗಳಿಂದ ಬಂದಂತಹ ಸ್ಪರ್ಧಾಳುಗಳು ಶ್ರೇಷ್ಠ ಮಟ್ಟದ ದಫ್ ಪ್ರದರ್ಶನ ತೋರ್ಪಡಿಸಿದರು. ಖುವ್ವತುಲ್ ಇಸ್ಲಾಂ ದಫ್ ಕಮಿಟಿ ಪೊಲಿಪು‌ (ಕಾಪು) ತೃತೀಯ ಪ್ರಶಸ್ತಿಗೆ ಭಾಜನರಾದರೆ, ಅನ್ಸಾರಿಯ ದಫ್ ಕಮಿಟಿ ಕೃಷ್ಣಾಪುರ ದ್ವಿತೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿತು. ಮುಂದೆ ಈ ಸ್ಪರ್ಧೆಯ ಚಾಂಪಿಯನ್ ಪಟ್ಟವನ್ನು ತಾಜುಲ್ ಹುದಾ ದಫ್ ಕಮಿಟಿ ರೆಂಜಾಡಿ ಅಲಂಕರಿಸಿತು.

ಈ ಸಂದರ್ಭದಲ್ಲಿ ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್,ಉದ್ಯಮಿ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ಹಾಜಿ ಮುಸ್ತಪಾ ಕೆ ಎಂ, ಉಪಾಧ್ಯಕ್ಷರು MEIF ದ.ಕ ಮತ್ತು ಉಡುಪಿ ಜಿಲ್ಲೆ, ಪೈಚಾರ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಪಿ, ನ ಪಂ ಸದಸ್ಯ ಶರೀಫ್ ಕಂಠಿ ಸದಸ್ಯರು,ಗ್ರಾಮ ಪಂಚಾಯತ್ ಸದಸ್ಯ ಮುಜೀಬ್‌ ಪೈಚಾರ್‌, ಸದಸ್ಯರು, ಗ್ರಾಮ ಪಂಚಾಯತ್, ರಜಾಕ್,  ಕೆನರಾ ಸದಸ್ಯರು, ಗ್ರಾಮ ಪಂಚಾಯತ್ ಸವಣೂರು, ಎಂ.ಎ ರಫೀಕ್ ಸದಸ್ಯರು, ಗ್ರಾಮ ಪಂಚಾಯತ್, ಸವಣೂರು, ನಝೀರ್ ಶಾಂತಿನಗರ ಅಧ್ಯಕ್ಷರು, SDMC ಸ.ಹಿ.ಪ್ರಾ. ಶಾಲೆ ಶಾಂತಿನಗರ, ಡಾ. ಬಶೀರ್ R.B, ಅಧ್ಯಕ್ಷರು, ಕಾರುಣ್ಯ ಚಾರಿಟೇಬಲ್ ಟ್ರಸ್ಟ್(ರಿ) ಪೈಚಾ‌ರ್, ಅಶ್ರಫ್‌ ಟರ್ಲಿ ಸಾಮಾಜಿಕ ಹೋರಾಟಗಾರರು, ಫೈಝಲ್ ಕಟ್ಟೆಕ್ಕಾರ್ ಯುವ ಉದ್ಯಮಿಗಳು ಸುಳ್ಯ, ಸಿದ್ದೀಕ್ ಕೊಡಿಯಮ್ಮೆ ಅಧ್ಯಕ್ಷರು, ದುಲ್ ಫುಕಾರ್ ದಫ್ ಅಸೋಸಿಯೇಶನ್ ಸುಳ್ಯ, ಬದ್ರುದ್ದೀನ್ ಪೈಚಾ‌ರ್ ಮಾಲಕರು, ಕಾವೇರಿ ಗ್ರೂಪ್ ಪುತ್ತೂರು,ಶಾಫಿ ಪ್ರಗತಿ ಮ್ಹಾಲಕರು ಪ್ರಗತಿ ಸೌಂಡ್ಸ್ ಪೈಚಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *