ಕೆಲವೊಂದು ಬಾರಿ ನಾವು ನೋಡದಿರುವಂತಹ ಸ್ಥಳಗಳಿಗೆ ತೆರಳಲು ಸಹಜವಾಗಿ ಗೂಗಲ್ ಮ್ಯಾಪ್ ಮೇಲೆ ಅವಲಂಬಿತರಾಗುತ್ತೇವೆ. ಆದರೆ ಗೂಗಲ್ ಮ್ಯಾಪ್ ನಂಬಿ ಅದೆಷ್ಟೋ ಅವಘಡಗಳು ಸಂಬಂಧಿಸಿದ್ದು, ಇದೀಗ ಉತ್ತರ ಪ್ರದೇಶದಲ್ಲಿ ಇದೆ ಒಂದು ಗೂಗಲ್ ಮ್ಯಾಪ್ ನಂಬಿ ಮದುವೆಗೆ ಎಂದು ಹೊರಟಿದ್ದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಖಲ್ಪುರ್-ದಾತ್‌ಗಂಜ್ ಪ್ರದೇಶದಲ್ಲಿ ನಡೆದಿದೆ.
ಹೌದು ಉತ್ತರ ಪ್ರದೇಶದ ಬರೇಲಿಯಲ್ಲಿ ಗೂಗಲ್ ಮ್ಯಾಪ್ಸ್‌ನಲ್ಲಿನ ಎಡವಟ್ಟಿನ ಕಾರಣದಿಂದ ಭಾರೀ ದುರಂತ ಸಂಭವಿಸಿದೆ. ಮದುವೆ ಮನೆಗೆ ರೀಚ್ ಆಗಲು ವ್ಯಕ್ತಿಗಳು ಗೂಗಲ್ ಮ್ಯಾಪ್ಸ್ ನೆಚ್ಚಿಕೊಂಡಿದ್ದರು. ಆದರೆ, ಗೂಗಲ್ ಮ್ಯಾಪ್ ಕಾಮಗಾರಿ ನಡೆಯುತ್ತಿದ್ದ ಬ್ರಿಜ್‌ಅನ್ನು ದಾರಿಯಾಗಿ ತೋರಿಸಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಾಗಿದ ಕಾರು, ನದಿಗೆ ಉರುಳಿ ಬಿದ್ದು ಮೂವರು ಸಾವು ಕಂಡಿರುವ ಘಟನೆ ನಡೆದಿದೆ.
ಬೆಳಗ್ಗೆ 10 ಗಂಟೆಯ ವೇಳೆಗೆ ಖಲ್ಪುರ್-ದಾತ್‌ಗಂಜ್ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದ ಸೇತುವೆಯ ಮಾಹಿತಿ ತಿಳಿಯದೇ ವಾಗವಾಗಿ ಚಲಿಸಿದೆ. ಈ ವೇಳೆ ಕಾರು ರಾಮ್‌ಗಂಗಾ ನದಿಗೆ ಉರುಳಿ ಬಿದ್ದಿದ್ದು ಪ್ರಯಾಣ ಮಾಡುತ್ತಿದ್ದ ಮೂವರು ಸಾವು ಕಂಡಿದ್ದಾರೆ. ಸಾವು ಕಂಡಿರುವ ಇಬ್ಬರನ್ನು ವಿವೇಕ್ ಹಾಗೂ ಅಮಿತ್ ಎಂದು ಗುರುತಿಸಲಾಗಿದೆ.ಸ್ಥಳೀಯರು ಸೇತುವೆಯ ಮೇಲಿನಿಂದ ಕಾರು ಬಿದ್ದಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ನಜ್ಜುಗುಜ್ಜಾದ ಕಾರ್‌ನಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.