ಮಂಗಳೂರಿನ ಅಡ್ಯಾರು ಬಳಿಯಿರುವ ಬರಕಾ ಇಂಟರ್ನ್ಯಾಷನಲ್ ಸ್ಕೂಲ್ & ಕಾಲೇಜಿನಲ್ಲಿ ನವೆಂಬರ್ ೨೨, ೨೩ ರಂದು ಎರಡು ದಿನಗಳ ವಾರ್ಷಿಕೋತ್ಸವ ಕಾರ್ಯಕ್ರಮ “ಬ್ಲೂಮಿಂಗ್ ಮೈಂಡ್ಸ್” ವಿಜ್ರಂಭಣೆಯಿಂದ ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ. ಸಹ್ಲಾ ಹುಸೈನ್, ಶ್ರೀಮತಿ ಸಬೀಹಾ ಫಾತಿಮಾ, ಶ್ರೀಮತಿ ಸಮೀನಾ ಅಶ್ಫಾನ್, ಶ್ರೀಮತಿ ಮಂಜುಳಾ ನಾಯಕ್, ಶ್ರೀ ಐವನ್ ಡಿಸೋಜಾ, ಶ್ರೀ ಮೂಸಬ್ಬ ಪಿ ಬ್ಯಾರಿ, ಶ್ರೀ ಎ.ಕೆ. ಕುಕ್ಕಿಲ, ಶ್ರೀ ಉನ್ಹಿ ಬ್ಯಾರಿ ಪಿ., ಜನಾಬ್ ಯಹ್ಯಾ ತಂಗಳ್, ಶ್ರೀ ಸುರೇಂದ್ರ ಕಂಬಳಿ, ಮೌಲಾನಾ ಶುಐಬ್ ನದ್ವಿ, ಶ್ರೀ ವಿಕ್ರಾಂತ್ ಕಂಬಳಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಬರಕಾ ಸಂಸ್ಥೆಯ ಅಧ್ಯಕ್ಷರಾದ ಅಶ್ರಫ್ ಬಜ್ಪೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಕುರ್ಆನ್ ಕಂಠಪಾಠದಲ್ಲಿ (ಹಿಫ್ಝ್) ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದ ಸಭಿಕರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಸಂಘಟಿಸಲಾಗಿದ್ದ ಇಸ್ಲಾಮಿಕ್ ವಸ್ತು ಪ್ರದರ್ಶನದ ಸ್ಟಾಲ್ ವಿಷೇಶ ಆಕರ್ಷಣೆಯಾಗಿತ್ತು. ಸಾವಿರಾರು ಪೋ಼ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.