ಕಳೆದ ಕೆಲ ದಿನಗಳಿಂದ ಸುಳ್ಯದಲ್ಲಿ ಕಳ್ಳರ ಅಟ್ಟಹಾಸ ಬಲು‌ಜೋರಾಗಿತ್ತು. ಎರಡು ದಿನಗಳ ಹಿಂದೆ ಪೈಚಾರು ಫುಡ್ ಪಾಯಿಂಟ್ ಹೊಟೇಲಿಗೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಿದ್ದ ಚಾಲಾಕಿ ಕಳ್ಳನನ್ನು ಸುಳ್ಯ ಪೋಲಿಸರ ಜೊತೆಗೆ ಪೈಚಾರಿನ ಯುವಕರು ಸೇರಿಕೊಂಡು ಛಲ ಬಿಡದೆ ಹಗಲಿರುಳು ಹುಡುಕಾಟ ನಡೆಸಿ ಕೊನೆಗೂ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ವರದಿಯಾಗಿದೆ.

ನ.30 ರಂದು ನಡೆದಿದ್ದ ಹೊಟೇಲ್ ಕಳ್ಳತನದ ಬಳಿಕ ಪೋಲಿಸ್ ಅಧಿಕಾರಿಗಳ ಜೊತೆಗೆ ಪೈಚಾರ್ ಸ್ಥಳೀಯ ಯುವಕರ ತಂಡ ಈತನಕ ಪತ್ತೆಗಾಗಿ ಹಗಲು ರಾತ್ರಿ ಎನ್ನದೇ ಗುಂಡ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು, ಕಲ್ಲುಗುಂಡಿ, ಗುತ್ತಿಗಾರು ಮುಂತಾದ ಕಡೆಗಳಿಗೆ ರಾತ್ರಿಯಿಡೀ ಪೋಲಿಸ್ ಅಧಿಕಾರಿಗಳಾದ ಪಿಎಸ್ ಐ ಸಂತೋಷ್ ಕುಮಾರ್, ಸಿಬ್ಬಂದಿಗಳಾದ ಪ್ರಕಾಶ್, ಅನುಕುಮಾರ್, ಪೈಚಾರ್ ಯುವಕರ ತಂಡವಾದ ಬಶೀರ್ ಪೈಚಾರ್, ನಝೀರ್,  ರಿಫಾಯಿ, ಅಶ್ರಫ್ ಹಾಗೂ ಇತರರು ತೆರಳಿ ಕಳ್ಳನ ಪತ್ತೆಯಾಗದೇ ವಾಪಸ್ಸಾಗಿದ್ದರು.

ಇದಲ್ಲದೇ ಹೋಟೆಲ್ ಸಿಸಿ ಟಿವಿ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸಿ ಈತನನನ್ನು ಕಂಡಲ್ಲಿ ಮಾಹಿತಿ ನೀಡುವಂತೆ ಪ್ರಸಾರ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಂತೆ ಡಿ.2 ರ ಮಧ್ಯಾಹ್ನ ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಚಿತ್ರದ ವ್ಯಕ್ತಿಯಂತೆ ಓರ್ವರಿಗೆ ಈ ಕಳ್ಳನನ್ನು ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಕಂಡಿದ್ದು ಕೂಡಲೇ ಅಲ್ಲಿ ಹುಡುಕಾಟ ನಡೆಸುತ್ತಿದ್ದ ತಂಡಕ್ಕೆ ಮಾಹಿತಿ ನೀಡಿದ್ದರು, ತಕ್ಷಣ ಅಲ್ಲಿಗೆ ತೆರಳಿ ಕಳ್ಳನನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈತನನ್ನು ಸುಳ್ಯ ಠಾಣೆಯಲ್ಲಿ ವಿಚಾರಣೆ ಒಳಪಡಿಸಿದ್ದಾರೆ ತಿಳಿದು ಬಂದಿದೆ.

ಪೈಚಾರ್ ಸ್ಥಳೀಯ ಯುವಕರು ಮತ್ತು ಪೋಲಿಸ್ ಅಧಿಕಾರಿಗಳ ಶತಾಯಗತಾಯ ಪರಿಶ್ರಮದಿಂದ ಇದೀಗ ಕಳ್ಳತನ ಆರೋಪಿಯನ್ನು ಪತ್ತೆ ಹಚ್ಚಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Leave a Reply

Your email address will not be published. Required fields are marked *