ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಬಿ ರವರಿಂದ ಸರಕಾರದ ಪರ ಸಮರ್ಥವಾದ ಮಂಡನೆ

ಮೂಳೂರು ಗ್ರಾಮ ಪಡ್ಡೆಯಿ ಪದವು ನಿವಾಸಿ ಮುಫೀಝ್ ಎಂಬಾತ ತನ್ನ ತಂದೆ ಮಹಮ್ಮದ್ ಅಬ್ದುಲ್ ರಜಾಕ್, ಸಫಿಯ, ಮಿನಝೀರ ಅವರೊಂದಿಗೆ ಸೇರಿ ಪತ್ನಿಗೆ ವರದಕ್ಷಿಣೆ ತರುವಂತೆ ದೈಹಿಕ, ಮಾನಸಿಕ ಒತ್ತಡ ಮತ್ತು ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದರು.
ಪತ್ನಿ ಗರ್ಭಿಣಿಯಾಗಿದ್ದಾಗ ಕೂಡಾ ಆರೋಪಿಗಳು ಮಾನಸಿಕ ಹಾಗೂ ದೈಹಿಕ ವಾಗಿ ಹಿಂಸೆ ನೀಡಿದ್ದು, ನೊಂದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಮಯ ಹೆಣ್ಣು ಮಗು ಅಪ ಶಕುನ ಎಂದು ಅವಹೇಳನ ಮಾಡಿ ಮಾನಸಿಕ ಕಿರುಕುಳ ನೀಡಿದ ಬಗ್ಗೆ ನೊಂದ ಮಹಿಳೆಯ ತಂದೆ ಬಜಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ: 43/2020 ರಲ್ಲಿ ಕಲಾಂ 498(A ,) IPC & ಕಾಲಂ 3 ಮತ್ತು 4 ಡಿ. ಪಿ ಕಾಯ್ದೆ ಪ್ರಕಾರ ದೂರು ದಾಖಲಿಸಿದ್ದರು.

ಘಟನೆಗೆ ಸಂಬಂಧಿಸಿ ಆಗಿನ ಪೋಲಿಸ್ ನಿರೀಕ್ಷಕ ಕೆ.ಆರ್ ನಾಯ್ಕ್ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಮಂಗಳೂರಿನ 6 ನೇ JMFC ನ್ಯಾಯಾಲಯದ ನ್ಯಾಯಾಧೀಶರಾದ ಪೂಜಾಶ್ರೀ H.S ಅವರು ಆರೋಪಿಗಳ ವಿರುದ್ಧ ಹೊರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ .

ಶಿಕ್ಷೆಯ ಪ್ರಮಾಣ ಕಲಂ 498(a) ರ ಅಪರಾಧಕ್ಕೆ ಒಂದನೇ ಆರೋಪಿಗೆ 6 ತಿಂಗಳೂ ಜೈಲು ವಾಸ ಮತ್ತು 2000 ರೂಪಾಯಿ ದಂಡ ,ದಂಡ ತೆರಲು ತಪ್ಪಿದಲ್ಲಿ ಮತ್ತೆ ಹದಿನೈದು ದಿನಗಳ ಜೈಲು ವಾಸ,2 ರಿಂದ 4 ಆರೋಪಿಗಳಿಗೆ 2 ತಿಂಗಳೂ ಜೈಲು ವಾಸ ಮತ್ತು ತಲಾ 500 ರೂಪಾಯಿ ದಂಡ
ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3 ರಲ್ಲಿನ ಅಪರಾಧಕ್ಕೆ ಒಂದನೇ ಆರೋಪಿ ಮುಫೀಝ್ ಗೆ 6 ತಿಂಗಳು ಜೈಲು ವಾಸ ಮತ್ತು 5000 ದಂಡ ,ದಂಡ ತೆರಲು ತಪ್ಪಿದಲ್ಲಿ ಮತ್ತೆ ಹದಿನೈದು ದಿನಗಳ ಜೈಲು ವಾಸ
ಇದೇ ಅಪರಾಧಕ್ಕೆ 2 ರಿಂದ 4 ಆರೋಪಿಗಳಿಗೆ 2 ತಿಂಗಳು ಜೈಲು ವಾಸ ಮತ್ತು 1500 ರೂಪಾಯಿ ದಂಡ,ದಂಡ ತೆರಲು ತಪ್ಪಿದಲ್ಲಿ ಮತ್ತೆ ಹದಿನೈದು ದಿನ ಗಳ ಜೈಲು ವಾಸ,

ಕಲಂ 4 ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕಾರ ಅಪರಾಧಕ್ಕೆ ಒಂದನೇ ಆರೋಪಿ ಮುಫೀಜ್ ಗೆ 6 ತಿಂಗಳು ಜೈಲು ವಾಸ ಮತ್ತು 3000 ರೂಪಾಯಿ ದಂಡ ದಂಡ ತೆರಲು ತಪ್ಪಿದಲ್ಲಿ ಮತ್ತೆ ಹದಿನೈದು ದಿನ ಗಳ ಜೈಲು ವಾಸ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

ದಂಡ ಪ್ರಕ್ರಿಯಾ ಸಂಹಿತೆ ಕಲಂ,357 ರಂತೆ 10000 ರೂಪಾಯಿ ಯನ್ನು ಸಂತ್ರಸ್ತೆ ,ನೊಂದ ಮಹಿಳೆಗೆ ಪರಿಹಾರ ನೀಡಲು ಆದೇಶ ನೀಡಲಾಗಿದೆ.

ಈ ಪ್ರಕರಣದಲ್ಲಿ ಸರ್ಕಾರದ
ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಪುತ್ತೂರು ಅವರು ವಾದಿಸಿದ್ದಾರೆ. ಜನಾರ್ದನ್ ಅವರು ಈ ಹಿಂದೆ ಸುಳ್ಯ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿದ್ದರು ಅಲ್ಲಿಯೂ ಬಹಳಷ್ಟು ಪ್ರಕರಣ ಗಳಲ್ಲಿ ಸರಕಾರದ ಪರವಾಗಿ ವಾದಿಸಿ ಜನ ಮೆಚ್ಚುಗೆಯನ್ನು ಪಡೆದಿದ್ದರು.
ಮಂಗಳೂರಿನಲ್ಲಿಯೂ ಇವರು ವಾದಿಸಿದ ಹಲವಾರು ಗಾಂಜಾ ಪ್ರಕರಣಗಳು ,ಅಪಘಾತ ಪ್ರಕರಣಗಳು,ಮಹಿಳೆಯರ ಮಾನ ಭಂಗ ಪ್ರಕರಣ, ವಂಚನೆ ಪ್ರಕರಣ ಸೇರಿದಂತೆ ಹಲವು ಪ್ರಕರಗಳಲ್ಲಿ ಸಮರ್ಥ ರೀತಿಯಲ್ಲಿ ವಾದ ಮಂಡಿಸಿ ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿ ಆಗಿದ್ದಾರೆ.

Leave a Reply

Your email address will not be published. Required fields are marked *