ಯುವಕರ ಮದುವೆ, ಅಂಕಲ್ ಗಳ ರಗಳೆ
ಕ್ಯಾಲೆಂಡರ್ ಬದಲಾದರೂ, ಬದಲಾವಣೆ ಆಗದವರ ಬಗ್ಗೆ

ಒಬ್ಬ ಯುವಕ, ಯುವತಿಯ ಮದುವೆ ಆಗಬೇಕಾದರೆ ಎಂಗೇಜ್ಮೆಂಟ್ ಎಂಬ ದೊಡ್ಡ ವೇದಿಕೆ ಅಲ್ಲಿ ನಮ್ಮ ಸಂಸ್ಕೃತಿಯಲ್ಲದ ಆಚರಣೆಗಳು, ಆನಾಚಾರಗಳು.
ಮದುವೆಯ ಒಂದು ವಾರ ಮೊದಲೇ ಆರಂಭವಾಗುವ ಡೊಳ್ಕಿ, ರಂಗೋಲಿ, ರೋಸ್, ಹಲ್ದಿ, ಮೆಹಂದಿ, ಬ್ರೈಡ್ ಟು ಬಿ, ಗ್ರೂಮ್ ಟು ಬಿ ಬಗ್ಗೆ ಎಲ್ಲಾ ಮಾತನಾಡಲು, ಅದರ ವಿರುದ್ಧ ಬರೆಯಲು ಹೋರಾಟ ಮಾಡಲು ಎಲ್ಲಾ ಜನ ಇದ್ದಾರೆ, ಆದರೆ ಹೆಚ್ಚಿನ ಯುವಕ – ಯುವತಿಯರ ಮದುವೆಗೆ ಅಡ್ಡವಾಗಿ ಬರುವ ಟೀ ಅಂಗಡಿಯಲ್ಲಿ, ಪೇಟೆಯಲ್ಲಿ ಕುಳಿತು ಗುಸು ಗುಸು ಮಾತನಾಡಿ ಸುಳ್ಳು ಸುಳ್ಳು ಅಪಾದನೆ ಮಾಡುವ ಮಧ್ಯಮ ವಯಸ್ಸು ದಾಟಿದ ಅಂಕಲ್ಗಳ ಬಗ್ಗೆ, ಸುತ್ತ ಮುತ್ತಲಿನ ಮನೆಯಲ್ಲಿ ಕುಳಿತು ಬ್ರೇಕಿಂಗ್, ಸ್ಪೆಷಲ್ ನ್ಯೂಸ್ ನೀಡುವ ಆಂಟಿಯರ ಬಗ್ಗೆ ಬರೆಯಲು, ಹೇಳಲು, ಮಾತನಾಡಲು ನಿಮಗೆ ಆಗಲ್ವ ಅಂತ ಕೇಳಿದವರಿಗಾಗಿ ನಾನು ಈ ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ ಅಷ್ಟೇ.

ನನ್ನ ಮಿತ್ರರ ಗುಂಪಿನಲ್ಲಿ ನನ್ನಕ್ಕಿಂತ 10 ವರ್ಷ ಕಿರಿಯರು ಇದ್ದಾರೆ, ನನ್ನಕ್ಕಿಂತ 20 ವರ್ಷದ ಹಿರಿಯರು ಇದ್ದಾರೆ.
(ಸ್ಪಷ್ಟವಾಗಿ ಹೆಳಬೇಕಾದರೆ 20-50ರ ಒಳಗಿನವ್ರು)
ಅದಕ್ಕಿಂತ ಹಿರಿಯ ವಯಸ್ಸಿನ ನವರ ಜೊತೆಗೆ ಆತ್ಮಿಯತೆಯಿಂದ ಇದ್ದೀನಿ.

ನನ್ನ ಮದುವೆಯ ಸಂಧರ್ಭದಲ್ಲಿ ಯಾವ ಅಂಕಲ್ ಕೂಡ ನನ್ನ ವಿರುದ್ಧ ಅವಳ ಮನೆಯಲ್ಲಿ ಮಾತನಾಡಿಲ್ಲ ಎಂಬಾ ಸಂತೋಷವಿದೆ ಏಕೆಂದರೆ, ನಾನು ಮದುವೆ ಯಾಗಿದ್ದು 5ಜಿ ಕಾಲದಲ್ಲಾದರೂ ಮೊಬೆಲ್ ನೆಟ್ವರ್ಕ್ ಸ್ವಲ್ಪ ಕಡಿಮೆಯಿರುವ ಏರಿಯಾ ದಿಂದಲೇ
ಆದ ಕಾರಣವಾಗಿರಬೇಕು ನನ್ನ ಮಾನಕ್ಕೆ, ಮರ್ಯಾದೆಗೆ ಕುತ್ತು ಬರದ ಹಾಗೇ ಮಾತನಾಡಿಲ್ಲ, ಹಾಗೇ ಮಾತನಾಡಬೇಕಾದ ಸಂಧರ್ಭವನ್ನು ಸೃಷ್ಟಿಕರ್ತನ ಮೇಲಿನ ಭಯದಿಂದ ಸೃಷ್ಟಿಸಿಲ್ಲ ಎಂಬುದೆ ಮತ್ತೊಂದು ಸತ್ಯ
(ಶಾಲಾ – ಕಾಲೇಜು ದಿನಗಳಲ್ಲಿ ಮಾಡಿದ ತಪ್ಪುಗಳು ಇಲ್ಲಿ ಉಲ್ಲೇಖವಲ್ಲ, ಅದು ಪ್ರಾಯದ ಚೇಷ್ಟೆಗಳು ಎಂದು ಸ್ವಯಂ ನಂಬಿರುವೆ).

ನನ್ನ ಮಿತ್ರನೊಬ್ಬನ ಮದುವೆಯ ಆಲೋಚನೆಗಾಗಿ ಹುಡುಗಿಯ ಕಡೆಯವರು ಅವನ ಊರಿನ ವೈಟ್ ಕಾಲರ್ ಜಾಬ್ಲೆಸ್ ಅಂಕಲ್ ರವರಲ್ಲಿ ಕೇಳಿದ್ರು, ಅವರು ಇವನ ಗುಣಗಾನ ಮಾಡಿ ಹಟ್ಟಕ್ಕೇರಿಸಿ ಕೊನೆಯಲ್ಲಿ ಹೇಳಿದ್ರು ಅವನ ಫ್ರೆಂಡ್ಸ್ ಸ್ವಲ್ಪ ಸರಿಯಿಲ್ಲ ಅವರ ಜೊತೆಗೆ ಸೇರಿ ಈಗ ಹೇಗೆ ಅಂತ ಗೊತ್ತಿಲ್ಲ, ಅಲ್ಪ ಸ್ವಲ್ಪ ದಾರಿ ತಪ್ಪಿದ್ದಾನೆ ನೀವು ಸ್ವಲ್ಪ ಸಮಯ ತೆಗದುಕೊಂಡು ನಿಮ್ಮ ಮಗಳಿಗೆ ಬೇರೆ ಹುಡುಗ ಹುಡುಕುವುದು ಒಳಿತು ಎಂದೂ,
ವಿಷಯ ಏನೂ ಅಂದ್ರೆ ಈ ಅಂಕಲ್ ಗೆ ಸತ್ಯವಾಗಿ ಕೂಡ ಆ ಹುಡುಗನ ಪರಿಚಯವಿಲ್ಲ, ಎಲ್ಲೋ ಕೇಳಿದ ವ್ಯಕ್ತಿಯ ಮಗ ಇವನು ಅಂತ ಒಂದು ನೆನಪಿನಲ್ಲಿ ಈ ಅಂಕಲ್ ಮಾಡಿದ ಎಡವಟ್ಟಿನಿಂದಾಗಿ ಪಾಪ 30ನೇ ವಯಸ್ಸಲ್ಲೇ ಈಗಿನ ಹುಡುಗರ ಬಾಯಿಯಿಂದ ಬ್ಯಾಚ್ಲರ್ ಅಂಕಲ್ ಅಂತ ಪಟ್ಟ ಕಟ್ಟಿಕೊಂಡಿದ್ದಾನೆ ಈ ಯುವಕ.

ಈ ಅಂಕಲ್ ತನ್ನ ಯೌವನದಲ್ಲಿ ಮಾಡಿದ ತಪ್ಪಿಗೆ ಲೆಕ್ಕವಿರಲಿಕ್ಕಿಲ್ಲ,
ವಯಸ್ಸಾಗಿದೆ ಮರಣ ಹತ್ತಿರವಿದೆ ಎಂಬ ಸಾಮಾನ್ಯ ಅಲೋಚನೆ ಇಲ್ಲದೆ ಮಾಡುತ್ತಿರುವ ತಪ್ಪುಗಳಾಗಿವೆ.

ಅಂಕಲ್ ಗಳ ಕಾಟದಿಂದ ಮದುವೆಗೆ ಮುನ್ನ ಬಿದ್ದು ಹೋದ ಸಂಬಂಧಗಳು ಇರುವ ಹಾಗೇನೇ ಮದುವೆಯ ನಂತರದಲ್ಲಿ ಡೈವೋರ್ಸ್ ಆದ ಪ್ರಕರಣಗಳಲ್ಲಿಯೂ ಅಂಕಲ್ ಗಳ ಕಪ್ಪು ಕೈಗಳು ಇವೆ.
10ವರ್ಷ ಮೊದಲು ವರಧಕ್ಷಿಣೆ ಎಂಬಾ ಮಹಾ ಪಿಡುಗು ಕರಾವಳಿಯಲ್ಲಿ ಹೆಚ್ಚಾಗಿ ಇದ್ದ ಸಮಯದಲ್ಲಿ ಮದುವೆ ನಿಶ್ಚಿತಾರ್ಥದ ಸಮಯದಲ್ಲಿ ಈ ಅಂಕಲ್ ಗಳ ಉಪಟಳ ಹೆಚ್ಚಿತ್ತು,
ಆದರೆ ಕಾಲಕ್ರಮೇಣ ವರಧಕ್ಷಿಣೆ ವಿರುದ್ಧ ಯುವಕರ ಚಳುವಳಿಯು ಯಶಸ್ವಿಗೊಂಡ ಮೇಲೆ ಮದುವೆಯ ನಿಶ್ಚಿತಾರ್ಥದಲ್ಲಿ ಅಂಕಲ್ ಗಳ ಪಾತ್ರವು ಕಾಲ ಕ್ರಮೇಣ ಕಡಿಮೆಯಾದರೂ
ಅಂಗಡಿ, ಪೇಟೆಯಲ್ಲಿ ಅವರು ನಡೆಸುವ ಸುಳ್ಳು ಆಪಾಧನೆಗಳು ಇಂದು ಮುಂದುವರಿಯುತ್ತಿದೆ.

ಯುವಕರಿಗೆ ಮಾರ್ಗದರ್ಶನ ನೀಡಬೇಕಾದ ಕೆಲವು ಅಂಕಲ್ ಗಳು ಮಾಡುವ ತಪ್ಪು ಎಲ್ಲಾ ಅಂಕಲ್ ಗಳ ಮೇಲೆ ಬರಬಾರದು.

ಇಂದಿನ ಮಕ್ಕಳೇ, ನಾಳಿನ ಯುವಕರು…
ಹಾಗೆಯೇ
ಇಂದಿನ ಯುವಕರೇ, ನಾಳಿನ ಅಂಕಲ್ ಗಳು
ಆದರಿಂದ
ನಿಮ್ಮ ಮಕ್ಕಳ ಅಥವಾ ಮೊಮ್ಮಕ್ಕಳ ಭವಿಷ್ಯಕ್ಕಾಗಿಯಾದರೂ ಈ ರೀತಿಯ ತಪ್ಪುಗಳನ್ನು ಮಾಡಬೇಡಿ.

✍️ ಫಾರೂಕ್ ಕಾನಕ್ಕೋಡ್ (ಫಾ. ಕಾ)

Leave a Reply

Your email address will not be published. Required fields are marked *