ಸುಳ್ಯ ಡಿ.14: ಕೆಲವು ದಿನಗಳ ಹಿಂದೆ ಕಾಡಾನೆ ಬಂದಿದ್ದು ಸಿ.ಸಿ ಕ್ಯಾಮರಾದಲ್ಲಿ ಇದರ ದೃಶ್ಯಗಳು ವೈರಲ್ ಆಗಿದ್ದವು. ಇಂದು ಇಲ್ಲಿನ ಕಲ್ಲುಗುಂಡಿಯ ಪೊಲೀಸ್ ಉಪ ಠಾಣೆ ಬಳಿ ಹೆದ್ದಾರಿಯಲ್ಲಿ ಮತ್ತೆ ಸಲಗ ಪ್ರತ್ಯೇಕ್ಷಗೊಂಡು ಸಾರ್ವಜನಿಕರಿಗೆ ಆತಂಕದ ಸ್ಥಿತಿಯಾಗಿದೆ.
ಕೆಲವು ನಿಮಿಷಗಳ ಕಾಲ ಕಾಡಾನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಲಾಗಿ ಸಂಚಾರ ಮಾಡಿದ್ದರಿಂದ, ಪ್ರಯಾಣಿಕರು ಕೆಲವು ನಿಮಿಷಗಳ ಕಾಲ ಕಾದು ನಂತರ ಪ್ರಯಾಣ ಮುಂದುವರೆಸಿದರು.