ಡಿಸೆಂಬರ್ 14,15 ಮೈಸೂರು: ಇಲ್ಲಿನ ಈದ್ಗಾ ಮೈದಾನದಲ್ಲಿ SKSSF ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ ‘ಹೊಂಬೆಳಕು’ ಸರ್ಗಲಯ ರಾಜ್ಯ ಮಟ್ಟದ ಕಲೋತ್ಸವದಲ್ಲಿ ಸುಳ್ಯದ ಪ್ರತಿಭೆ ನಿಝಾರ್ ಶೈನ್ ಸೂಪರ್ ಸೀನಿಯರ್ ಜನರಲ್ ಪತ್ರಿಕಾ ವರದಿ ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಡಿಸೆಂಬರ್ 1ರಂದು ಉಪ್ಪಿನಂಗಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, SKSSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯನ್ನು ಪ್ರತಿನಿಧಿಸಿದ ಇವರು ರಾಜ್ಯ ಮಟ್ಟದಲ್ಲಿ ಹದಿನೆಂಟಕ್ಕೂಮಿಕ್ಕ ಜಿಲ್ಲೆಯ ಸ್ಪರ್ಧಾರ್ಥಿಗಳ ಪೈಕಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಸುಳ್ಯ ಅರಂಬೂರು ಪಾಲಡ್ಕ ನಿವಾಸಿಯಾಗಿರುವ ಅಂಜಿಕ್ಕಾರ್ ಅಬ್ಬಾಸ್ ಹಾಗೂ ಕದೀಜ ದಂಪತಿಗಳ ಪುತ್ರ.