ಸವಣೂರು ಡಿ.23: ಹೈದರಾಬಾದಿನ ಶಬರಿಮಲೆ ತೀರ್ಥಯಾತ್ರೆಗೆ ಹೊರಟ ಮಾಲಾಧಾರಿಗಳ ವಾಹನವು
ಸವಣೂರು ಚಾಪಳ್ಳ ಮಸೀದಿಯ ಮುಂಭಾಗದಲ್ಲಿ ಮಧ್ಯರಾತ್ರಿ ಕೆಟ್ಟು ಹೋಗಿತ್ತು, ಎಂದಿನಂತೆ ಬೆಳಗಿನ ಜಾವ ಚಾಪಳ್ಳ ಮಸೀದಿಗೆ ಬಂದ SDPI ಬೆಳ್ಳಾರೆ ಬ್ಲಾಕ್ ಅಧ್ಯಕ್ಷರಾದ ರಫೀಕ್ ಎಂ. ಎ ಸವಣೂರು ಮತ್ತು ಇಕ್ಬಾಲ್ ಕೆನರಾ ತಂಡ ಅಯ್ಯಪ್ಪ ಮಾಲದಾರಿ ಗಳಿಗೆ ಬೇಕಾದ ಸೌಕರ್ಯಗಳನ್ನು ಮಾಡಿಕೊಟ್ಟರು, ಮಸೀದಿಯ ಮತ್ತು ಗ್ರಾಮ ಪಂಚಾಯತಿನ ಶೌಚಾಲಯವನ್ನು ಉಪಯೋಗಿಸಲು ಅವಕಾಶ ಮಾಡಿಕೊಟ್ಟರು.
ಅಲ್ಲದೆ ಕೆಲವು ಮಾಲಾಧಾರಿಗಳ ಮೊಬೈಲ್ ಫೋನ್ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆದಂತಹ ಸಂದರ್ಭದಲ್ಲಿ ಮಸೀದಿಯಲ್ಲಿ ಚಾರ್ಜ್ಗೆ ಇಟ್ಟು, ಕೆಟ್ಟು ಹೋದ ವಾಹನವನ್ನು ಸರಿ ಮಾಡಲು ಬೆಳ್ಳಂಬೆಳ್ಳಿಗ್ಗೆ ಸ್ಥಳೀಯ ಮೆಕಾನಿಕರಾದ ಪವನ್ ಅನ್ಯಾಡಿ, ಪ್ರಶಾಂತ್ ಹಾಗೂ ರವರನ್ನು ಕರೆಸಿ ವಾಹನವನ್ನು ದುರಸ್ತಿ ಮಾಡಿಸಿದರು.
ಯಾವುದೋ ಊರಿನಿಂದ ಬಂದು, ಸರಿಯಾಗಿ ಕನ್ನಡವೂ ಮಾತನಾಡಲು ಆಗದೆ, ಈ ಊರಿನ ಪರಿಚಯವೂ ಇಲ್ಲದೆ, ಪರದಾಡುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರಯಾಣ ಮುಂದುವರಿಸಲು ಅನು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಬಿ ಎಂ ಮಹಮ್ಮದ್, ಜಗನ್ನಾಥ, ರಫೀಕ್ ಹಾಜಿ, ಕರೀಂ ಸಮಹಾದಿ, ಮುಂತಾದವರು ಜೊತೆಗೂಡಿದರು, ಅಯ್ಯಪ್ಪ ಮಾಲದಾರಿಗಳು ಕೃತಜ್ಞತೆಗಳನ್ನು ಹೇಳುತ್ತಾ, ಸಹಾಯ ಮಾಡಿದವರೊಂದಿಗೆ ಫೋಟೋ ಕ್ಲಿಕ್ಕಿಸಿ, ಮುಂದುವರಿದರು, ಜಾತಿ ಜಾತಿಗಳ ಮಧ್ಯೆ, ವಿಷ ಬೀಜ ಬಿತ್ತಿ, ಮಾನವ ಹೃದಯಗಳನ್ನು ದೂರಮಾಡುವ, ಪ್ರಯತ್ನ ಕೆಲವು ಸಮಾಜಘಾತುಕರಿಂದ ನಿರಂತರವಾಗಿ ನಡೆಯುತ್ತಿದ್ದರೂ, ಮಸೀದಿ ಮಂದಿರಗಳ ವಿಷಯದಲ್ಲಿ ಪರಸ್ಪರ ಕಚ್ಚಾಡಿಸುತ್ತಿದ್ದರೂ,
ಪರಸ್ಪರ ಸಹಾಯ ಮಾಡಿ ಪ್ರೀತಿ ಹಂಚಿದ ಈ ಸ್ಥಳೀಯರಿಗೆ ಪ್ರಸಂಶೆಗಳ ಸುರಿಮಳೆ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.