ಸುಳ್ಯ: ಇಲ್ಲಿನ ಪೈಚಾರಿನ ಫ್ಯುಯಲ್ ಸ್ಟೇಶನ್ ನಿಂದ ಕಾರಿಗೆ ಡೀಸೆಲ್ ತುಂಬಿಸಿ ಹಣ ಪಾವತಿಸದೆ ಚಾಲಕ ಪರಾರಿಯಾಗಿರುವ ಘಟನೆ ಡಿ. 25 ರಂದು ಬೆಳಗ್ಗೆ ನಡೆದಿದೆ.
ಸುಳ್ಯ ಕಡೆಯಿಂದ ಬಂದ ಮಹೇಂದ್ರ ಕಂಪೆನಿಯ ಕಾರೊಂದು ಪೈಚಾರು ಬಂಕ್ ಗೆ ಬಂದು ಸುಮಾರು ₹5 ಸಾವಿರ ಮೊತ್ತದ ಡೀಸೆಲ್ ತುಂಬಿಸಿದ್ದರು.
ಮತ್ತೆ ಸಿಬ್ಬಂದಿ ಕೈಗೆ ಒಂದು ಖಾಲಿ ಬಾಟಲಿ ನೀಡಿ ಅದರಲ್ಲಿ 2 ಲೀಟರ್ ಪೆಟ್ರೋಲ್ ತುಂಬಿಸುವಂತೆ ಹೇಳಿದಾಗ ಬಂಕ್ ನ ಸಿಬ್ಬಂದಿ ಪೆಟ್ರೋಲ್ ತುಂಬಿಸಲು ಮುಂದಾಗುತ್ತಿದ್ದಂತೆ ವೇಗವಾಗಿ ಕಾರು ಚಲಾಯಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಎನ್ನಲಾಗಿದೆ.
ಘಟನೆಯ ಬಳಿಕ ಪೆಟೋಲ್ ಬಂಕ್ ನವರು ಸಿ.ಸಿ ಟಿವಿ ಯಲ್ಲಿ ಪರಿಶೀಲನೆ ನಡೆಸಿದ್ದು ಕಾರು ಬೆಂಗಳೂರು ರಿಜಿಸ್ಟ್ರೇಷನ್ ಆಗಿದ್ದು ಬಳಿಕ ಇದರ ಬಗ್ಗೆ ಮಾಹಿತಿ ಪಡೆದಾಗ ಅದು ಫೇಕ್ ನಂ. ಪ್ಲೇಟ್ ಎಂದು ಕೂಡ ತಿಳಿಯಲಾಗಿದೆ. ಈ ಬಗ್ಗೆ ಬಂಕ್ ನವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.