ಗೂನಡ್ಕ: ಬಿ ಯುನೈಟೆಡ್ ಗೂನಡ್ಕ ಇದರ ವತಿಯಿಂದ ನಡೆದ ಗೂನಡ್ಕ ಸೂಪರ್ ಲೀಗ್ ಸೀಸನ್ – 7
ಡಿಸೆಂಬರ್ 25 ರಂದು ಗೂನಡ್ಕದ ತೆಕ್ಕಿಲ್ ಶಾಲಾ ಮೈದಾನದಲ್ಲಿ ನಡೆಯಿತು. ರಾಯಲ್ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಸಾಜೀದ್ ಐ ಜಿ ಪಂದ್ಯಾಟಕ್ಕೆ ಪೆನಾಲ್ಟಿ ಕಿಕ್ ಮಾಡುವುದರ ಮೂಲಕ ಉಧ್ಘಾಟಿಸಿದರು.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಮಹಮ್ಮದ್ ಕುಂಜಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಹಾಲಿ ಸದಸ್ಯರು, ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಅಬೂಸಾಲಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಹಾಲಿ ಸದಸ್ಯರು, ಕೆ ಪಿ ಸಿ ಸಿ ಮಾಧ್ಯಮ ವಕ್ತಾರಾದ ಶೌಹಾದ್ ಗೂನಡ್ಕ, ತೆಕ್ಕಿಲ್ ಮಾದರಿ ಶಾಲೆ ಗೂನಡ್ಕ ಆಡಳಿತ ಸಮಿತಿ ಗೌರಾವಧ್ಯಕ್ಷರಾದ ತಾಜ್ ಮಹಮ್ಮದ್ ಪಂದ್ಯಾಟಕ್ಕೆ ಬಂದು ಶುಭ ಹಾರೈಸಿದರು.
ಪಂದ್ಯಾಟದಲ್ಲಿ ಕಿಫ ಎಫ್ ಸಿ (KIFA FC) ಚಾಂಪಿಯನ್ ಹಾಗೂ ಟೀಮ್ ಪೆವಿಲಿಯನ್ ರನ್ನರ್ಸ್ ಸ್ಥಾನ ಪಡೆಯಿತು. ವ್ಯಯುಕ್ತಿಕ ವಿಭಾಗದಲ್ಲಿ ಪ್ಲೇಯರ್ ಓಫ್ ದಿ ಟೂರ್ನಮೆಂಟ್ ಅಪ್ಪಾದು, ಪ್ಲೇಯರ್ ಓಫ್ ದಿ ಫೈನಲ್ ಮ್ಯಾಚ್ ಆಗಿ ಶಾಝಿನ್, ಬೆಸ್ಟ್ ಡಿಫೆಂಡರ್ ಆಗಿ ಅದ್ನಾನ್, ಬೆಸ್ಟ್ ಫಾರ್ವರ್ಡ್ ಆಗಿ ಸಿಯಾ, ಎಮರ್ಜಿಂಗ್ ಪ್ಲೇಯರ್ ಆಗಿ ಕರ್ರಾರ್ ರವರು ಪ್ರಶಸ್ತಿ ಪಡೆದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಂಪಾಜೆ ನಿರ್ದೇಶಕರಾದ ಜಿ ಕೆ ಹಮೀದ್ ವಹಿಸಿದರು.
ಮುಖ್ಯ ಅಥಿತಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಸಾಮಾಜಿಕ ಕಾರ್ಯಕರ್ತ ಖಾದರ್ ಮೊಟ್ಟೆoಗಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇಜಾಸ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು ಪಂದ್ಯಾಟವನ್ನು ಜಾಬಿರ್ ಎಂ ಬಿ ಹಾಗೂ ಖಾಶಿಮ್ ರಾಝ ಗೂನಡ್ಕ ಸಂಘಟಿಸಿದರು.