ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯ ಪ್ರತೀಕ ನಮ್ಮ ಗಣರಾಜ್ಯ ಸಂವಿಧಾನದ ಮಾರ್ಗದರ್ಶನದ ಬೆಳಕಿನಲ್ಲಿ ಹೆಜ್ಜೆ ಇಡೋಣ:- ಮುಹಮ್ಮದ್ ಸಖಾಫಿ ಅಲ್ ಹಿಕಮಿ

ಕೊಯನಾಡು:- ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಅಧೀನದಲ್ಲಿರುವ ಸುಬುಲು ಸ್ಸಲಾಂ ಮದ್ರಸದಲ್ಲಿ ಜನವರಿ 26 ರಂದು ಬೆಳಗ್ಗೆ 7 ಗಂಟೆಗೆ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್ ಮೊಯಿದಿನ್ ಕುಂಞಿ ಧ್ವಜಾರೋಹಣ ನೆರವೇರಿಸಿದರು, ಮದ್ರಸ ವಿಧ್ಯಾರ್ಥಿ ಇಫ್ಹಾಮ್ ಪ್ರತಿಜ್ಞಾ ಮಂಡಿಸಿದರು, ನಂತರ ಮದ್ರಸ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು, ಸಭಾ ಕಾರ್ಯಕ್ರಮದ ದುಆ ನೇತೃತ್ವವನ್ನು ಸದರ್ ಉಸ್ತಾದ್ ನೌಶಾದ್ ಫಾಳಿಲಿ ವಹಿಸಿದರು, ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ತಮ್ಮ ಪ್ರಸ್ತಾವಿಕ ಮಾತಿನಲ್ಲಿ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯ ಪ್ರತೀಕ ನಮ್ಮ ಗಣರಾಜ್ಯ ಸಂವಿಧಾನದ ಮಾರ್ಗದರ್ಶನದ ಬೆಳಕಿನಲ್ಲಿ ಹೆಜ್ಜೆ ಇಡೋಣ,ಸಂವಿಧಾನ ಎಂಬ ಭದ್ರ ಬುನಾದಿಯ ಮೇಲೆ ಭಾರತದ ಗಣರಜ್ಯೋತ್ಸದ ಕೀರ್ತಿಯನ್ನು ಮೇಲಕ್ಕೆತ್ತಲಿದೆ ಎಂದು ಸರ್ವರಿಗೂ ಗಣರಜ್ಯೋತ್ಸವ ದಿನಾಚರಣೆಯ ಶುಭಾಶಯಗಳು ಎಂದು ನುಡಿದರು, ಅಧ್ಯಕ್ಷ ಭಾಷಣದಲ್ಲಿ ಮಾತನಾಡಿದ ಹಾಜಿ ಎಸ್ ಮೊಯಿದಿನ್ ಕುಂಞಿ ರವರು ಭಾರತ ಸರ್ವರದ್ದು ಎಂಬ ಸಿದ್ದಾಂತ ತಿಳಿಸುವ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ, ಸರ್ವರಿಗೂ ಗಣರಜ್ಯೋತ್ಸವದ ಶುಭ ನುಡಿದರು, ಹನೀಫ್ ಎಸ್ ಪಿ, ಮಾತನಾಡಿ ಭಾರತದ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತದ ಘನ ಸಂವಿಧಾನವನ್ನು ಸ್ವೀಕರಿಸಿ ಶಾಸನವನ್ನಾಗಿ ವಿಧಿಸಿಕೊಂಡ ಈ ದಿನದಂದು ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಕೋರಿದರು, ಕಾರ್ಯಕ್ರಮದಲ್ಲಿ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಹನೀಫ್ ಎ ಪಿ, ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಎಸ್ ಎ, ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಮುನೀರ್ ಪಿ ಎಂ, ಮಾಜಿ ಉಪಾಧ್ಯಕ್ಷ ಕುಂಞಿಲಿ, ಸಮಿತಿ ಸದಸ್ಯರಾದ ಹಂಸ ತೆಕೀಲ್, ಮಹಮ್ಮದ್ ಅಲಿ, ಎಸ್ ಕೆ ಅಬ್ದುಲ್ ರಹಿಮಾನ್, ಅಬ್ದುಲ್ಲಾ, ಗಲ್ಫ್ ಸಮಿತಿ ಅಧ್ಯಕ್ಷ ರಹಮತ್, ಮತ್ತು ಸರ್ವ ಸದಸ್ಯರು, ಮದ್ರಸ ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸಿಹಿ ತಿಂಡಿ ನೀಡುವ ಮೂಲಕ ಕಾರ್ಯಕ್ರಮ ಕೊನೆಗೊಳಿಸಲಾಯಿತು.

Leave a Reply

Your email address will not be published. Required fields are marked *