ಹಾಲಿ ರನ್ನರ್ ಅಪ್ ಇಂಗ್ಲೆಂಡ್ ಹಾಗೂ ನೆದರ್ಲೆಂಡ್ ತಂಡಗಳು ಪ್ರತಿಷ್ಠಿತ ಯುರೋ ಕಪ್ ುಟ್‌ಬಾಲ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಬುಧವಾರ ಕಾದಾಟ ನಡೆಸಲಿವೆ. ಈ ಪಂದ್ಯದ ವಿಜೇತರು ಸ್ಪೇನ್ ಅಥವಾ ಫ್ರಾನ್ಸ್ ವಿರುದ್ಧ ಭಾನುವಾರ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

ಸ್ಟಾರ್ ಸ್ಟ್ರೈಕರ್‌ಗಳಾದ ಹ್ಯಾರಿ ಕೇನ್ ಮತ್ತು ನೆದರ್ಲೆಂಡ್‌ನ ಮೆಂಫಿಸ್ ಡಿಪೇ ನಡುವಿನ ಪೈಪೋಟಿ ಇದಾಗಿದೆ.

ಸತತ ಎರಡನೇ ಬಾರಿ ಸೆಮಿೈನಲ್ ಆಡಲಿರುವ ಇಂಗ್ಲೆಂಡ್ ತಂಡ ಪ್ರಶಸ್ತಿ ಜಯಿಸುವ ಫೇವರಿಟ್ ಎನಿಸಿದೆ. ಆದರೆ 20 ವರ್ಷಗಳ ಬಳಿ ನಾಲ್ಕರ ಘಟ್ಟಕ್ಕೇರಿರುವ ಡಚ್ಚರು 1988ರ ಬಳಿಕ ಮತ್ತೆ ಚಾಂಪಿಯನ್ ಆಗುವ ಹಂಬಲದಲ್ಲಿದ್ದಾರೆ. ನೆದರ್ಲೆಂಡ್ 2004ರಲ್ಲಿ ಕೊನೆಯದಾಗಿ ಉಪಾಂತ್ಯಕ್ಕೇರಿತ್ತು. ಕೋಡಿ ಗಾಕ್ಪೊ ಹಾಗೂ ಜೂಡ್ ಬೆಲ್ಲಿಂಗ್‌ಹ್ಯಾಮ್ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ. ಕೋಡಿ ಗಾಕ್ಪೊ ಟೂರ್ನಿಯಲ್ಲಿ ಉಳಿದಿರುವ ಗರಿಷ್ಠ ಗೋಲು ಸರದಾರ ಎನಿಸಿದ್ದು, ಡೋನಿಯೆಲ್ ಮಲೆನ್ (2) ಸಾಥ್ ನೀಡುತ್ತಿದ್ದಾರೆ. ಆಂಗ್ಲರ ಪರ ನಾಯಕ ಹ್ಯಾರಿ ಕೇನ್ ಹಾಗೂ ಬೆಲ್ಲಿಂಗ್ ಹ್ಯಾಮ್ ತಲಾ 2 ಗೋಲು ಸಿಡಿಸಿ ರೇಸ್‌ನಲ್ಲಿದ್ದಾರೆ. ಎರಡೂ ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಆರಂಭಿಕ ಹಿನ್ನಡೆಯಿಂದ ಕಂಬ್ಯಾಕ್ ಮಾಡಿ ಗೆಲುವು ಸಾಧಿಸಿವೆ. ಇಂಗ್ಲೆಂಡ್ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಜರ್ಲೆಂಡ್ ತಂಡವನ್ನು ಮಣಿಸಿದರೆ, ನೆದರ್ಲೆಂಡ್ 2-1ರಿಂದ ಟರ್ಕಿ ಎದುರು ಅರ್ಹ ಗೆಲುವು ದಾಖಲಿಸಿದೆ. ಫಿಫಾ ರ‌್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ (5), ನೆದರ್ಲೆಂಡ್‌ಗಿಂತ (7) ಉನ್ನತ ಶ್ರೇಯಾಂಕದಲ್ಲಿರುವ ಆತ್ಮವಿಶ್ವಾಸ ಹೊಂದಿದೆ.ಇಂಗ್ಲೆಂಡ್ ಹಾಗೂ ನೆದರ್ಲೆಂಡ್ ತಂಡಗಳು ಸಾಮರ್ಥ್ಯಕ್ಕೆ ತಕ್ಕಂತೆ ಆಡದೆ ಸೆಮಿಫೈನಲ್ ಹಂತಕ್ಕೆ ಬಂದಿವೆ, ಉಪಾಂತ್ಯದಲ್ಲಿ ರೋಚಕ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ.

ಇಂಗ್ಲೆಂಡ್‌ನ ಹ್ಯಾರಿ ಕೇನ್ ಸೆಮೀಸ್‌ನಲ್ಲಿ ಆರಂಭಿಕ ಬಳಗದಲ್ಲಿ ಕಣಕ್ಕಿಳಿಯುವುದು ಅನುಮಾನ ಎನಿಸಿದ್ದು, ಸ್ವಿಸ್ ಎದುರು ಸ್ನಾಯು ಸೆಳೆತಕ್ಕೆ ತುತ್ತಾಗಿದ ಅವರು ಹೆಚ್ಚುವರಿ ಸಮಯದ ಆಟದಿಂದ ಹೊರಗುಳಿದರು.ಇತ್ತ ನೆದೆರ್ಲೆಂಡ್ ಸತತ ಮೂರು ಪಂದ್ಯಗಳಲ್ಲಿ ಯಾವುದೇ ಆಟಗಾರರ ಬದಲಾವಣೆಯಿಲ್ಲದೇ ಕಣಕ್ಕಿಳಿದಿದೆ.

ಆರಂಭ: ರಾತ್ರಿ 12.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟವರ್ಕ್.

Leave a Reply

Your email address will not be published. Required fields are marked *