ಊಟಿ: ಮಸನಗುಡಿ ವಝಿ ಊಟಿಲೇಕ್ ಒರು ಯಾತ್ರಾ ಎಂಬ ರೀಲ್ಸ್ ವೈರಲ್ ಆದ ನಂತರ ಆ ರಸ್ತೆಯಲ್ಲಿ ಪ್ರವಾಸ ಕ್ಕಿಂತ ಹೆಚ್ಚು ರೀಲ್ಸ್ ಮಾಡಲು ಹೋಗುವವರೆ ಹೆಚ್ಚು.!!
ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಭಾಗವಾದ ಇಲ್ಲಿ ವನ್ಯ ಜೀವಿಗಳು ರಸ್ತೆಯ ಪಕ್ಕದಲ್ಲಿ ಇರುವುದಂತು ಸಹಜ. ಹೀಗೆ ಸುಳ್ಯದ ಇಬ್ಬರು ಯುವಕರು ತಮ್ಮ ಬೈಕ್ ನಲ್ಲಿ ಊಟಿ ತೆರಳುವಾಗ ರಸ್ತೆಯ ಬದಿತಲ್ಲಿದ್ದಂತಹ ಒಂಟಿ ಸಲಗ ವೊಂದು ಇದ್ದಕ್ಕಿದ್ದಂತೆ ದಾಳಿ ಮಾಡಲು ಮುಂದಾಗಿದೆ. ತಕ್ಷಣ ಬೈಕ್ ಚಾಲಕನ ಚಾಣಾಕ್ಷತನದಿಂದ ಕೂದಳೆಲೆಯಲ್ಲಿ ಅದೃಷವಶಾತ್ ಪಾರಾಗಿದ್ದಾರೆ. ಸುಳ್ಯದ ನಿವಾಸಿಯಾಗಿರುವ ಆಶಿಕ್ ಹಾಗೂ ಅರ್ಶಾಕ್ ಇಬ್ಬರು ದ್ವಿಚಕ್ರ ವಾಹನದ ಮೂಲಕ ಊಟಿ ರಸ್ತೆಯಲ್ಲಿ ಹೋಗುವಾಗ ಈ ಘಟನೆ ನಡೆದಿದೆ. ಎಡಕಡೆಯಿದ್ದ ಆನೆಯು ಏಕಾಏಕಿ ದಾಳಿ ಮಾಡಲು ಮುಂದಾಗಿದೆ, ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.