ಸುಳ್ಯ: ಶ್ರೀಯುತ ನಟರಾಜ್ ಸರ್ ಈ ಹೆಸರು ಸುಳ್ಯ ತಾಲೂಕಿನಾದ್ಯಂತ ಕೇಳದವರು ಬಹಳ ವಿರಳ, ಹೌದು ಸರಕಾರಿ ಪದವಿ ಪೂರ್ವ ಕಾಲೇಜ್ ದೈಹಿಕ ಶಿಕ್ಷಣ ಶಿಕ್ಷಕರಾದಂತಹ ಶ್ರೀ ನಟರಾಜ್ ಸರ್ ರವರು ಇದೇ ಬರುವ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಒಂದೇ ಶಾಲೆಯಲ್ಲಿ ಸುದೀರ್ಘ 30 ವರ್ಷಗಳ ಸೇವೆಯ ಬಳಿಕ ಇವರು ತಮ್ಮ ವೃತ್ತಿ ಜೀವನಕ್ಕೆ ವಿರಾಮ ಹಾಕಲಿದ್ದಾರೆ.
ಈ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ನಟರಾಜ್ ಸರ್ ಇವರ ಶಿಷ್ಯಂದಿರು ಹಾಗೂ ಅಭಿಮಾನಿ ಬಳಗದವರಿಂದ ಬೃಹತ್ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರ್.ಬಿ ಬಶೀರ್ ತಿಳಿಸಿದ್ದಾರೆ.


