ಮುಸ್ಲಿಂ ಸಮುದಾಯದ ಶಿಕ್ಷಣ ಸಂಸ್ಥೆ ದೇಶಕ್ಕೆ ಮತ್ತು ಸಮುದಾಯಕ್ಕೆ ಅಗತ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕರೆ


ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ( ಮೀಫ್ ) ಇದರ ನೂತನ ಕೊಡಗು ಘಟಕದ ಉದ್ಘಾಟನೆ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ಪಾಸಿಂಗ್ ಪ್ಯಾಕೇಜ್ ಕಾರ್ಯಾಗಾರವು ನಾಪೋಕ್ಲು ಹೊದವಾಡ ರಫೆಲ್ಸ್ ಶಿಕ್ಷಣ ಸಂಸ್ಥೆ ಯಲ್ಲಿ ಜರಗಿತು
ಕೊಡಗು ಘಟಕದ ಉದ್ಘಾಟನೆಯನ್ನು ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಮಾತನಾಡಿ ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿ ಗಳು ಅತೀ ಅಗತ್ಯ, ಕಾರ್ಯವೈಖರಿಯನ್ನು ಕೊಡಗು ಜಿಲ್ಲೆಗೆ ವಿಸ್ತರಿಸಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿದರು, ಶಾಸಕರಾದ ಮಂತರ್ ಗೌಡ ವಿದ್ಯಾರ್ಥಿಗಳಿಗೆ ಮೋಟಿವೇಶನ್ ನೀಡಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಂತ ಸಕ್ರೀಯವಾಗಿ ಭಾಗವಹಿಸಿದ 3 ವಿದ್ಯಾರ್ಥಿಗಳಿಗೆ ಬಹುಮಾನ ಘೋಷಿಸಿದರು.
ಕಾರ್ಯಾಗಾರದ ಉದ್ಘಾಟನೆಯನ್ನು ಕೊಡಗು ಜಿಲ್ಲೆ ಡಿ.ಡಿ.ಪಿ.ಐ ಶ್ರೀ ರಂಗಾಧಾಮಪ್ಪ ಉದ್ಘಾಟಿಸಿ, ಮೀಫ್ ನೀಡುವ ತರಬೇತಿ ಗಳು ಕೊಡಗು ಜಿಲ್ಲೆಯ ಫಲಿ
ತಾoಶ ಕ್ಕೆ ಸಹಕಾರಿ ಎಂದರು
ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಗೂನಡ್ಕ ಇದರ ಅಧ್ಯಕ್ಷರಾದ ಟಿ.ಎಂ ಶಾಹಿದ್ ತೆಕ್ಕಿಲ್, ಭಾಗವಹಿಸಿ ಮಾತನಾಡಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಶಾಸಕ ಮಂತರ್ ಗೌಡ ಅವರ ಕಾಳಜಿ ಪ್ರೋತ್ಸಾಹ ಮತ್ತು ಬೆಂಬಲ ಈ ಸಂಸ್ಥೆಯ ಕೊಡಗು ಜಿಲ್ಲೆಯ ಉದ್ಘಾಟನಾ ಸಮಾರಂಭ ಕೊಡಗಿನ ಚರಿತ್ರೆಗೆ ಸೇರುವಂತದ್ದು ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ನಡೆಸಲು ಕಷ್ಟ ಇದ್ದರು ಕಾಳಜಿ ವಹಿಸಿ ವಿದ್ಯಾಭ್ಯಾಸದಲ್ಲಿ ಹಿಂದೆ ಇರುವ ನಮ್ಮ ಸಮುದಾಯ ಶಿಕ್ಷಣಕ್ಕೆ ಮದರಸ ಜೊತೆ ಹೆಚ್ಚು ಒತ್ತು ಕೊಟ್ಟು ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿ ಕೊಡಗು ಜಿಲ್ಲೆಗೆ ರಾಜ್ಯಕ್ಕೆ ದೇಶಕ್ಕೆ ಮಾದರಿ ಸತ್ಪ್ರಜೆಗಳನ್ನು ನಿರ್ಮಿಸಲು ಕೊಡಗು ಜಿಲ್ಲಾ ಮೀಫ್ ಸಂಸ್ಥೆ ಸಹಕಾರಿಯಾಗಲಿ ಅಲ್ಲದೆ ಮುಸ್ಲಿಂ ಶಿಕ್ಷಣ ಸಂಸ್ಥೆ ದೇಶಕ್ಕೆ ಮತ್ತು ಸಮುದಾಯಕ್ಕೆ ಅಗತ್ಯ ಇದೆ ಹೆಚ್ಚು ಜನವಾಸ ಇರುವ ಬಡ ಜನರು ಇರುವಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸಿ ಎಂದು ಅಹ್ವಾನ ನೀಡಿದರು. ಕಾವೇರಿ ಕಾಲೇಜು ಗೋಣಿಕೊಪ್ಪ ಉಪನ್ಯಾಸಕರು ಡಾ. ಲೆಫ್ಟಿನೆಂಟ್ ಅಕ್ರo ಭಾಗವಹಿಸಿದರು.
ಎಸ್ ಎಸ್ ಎಲ್ ಸಿ ಫಲಿತಾಂಶ ಹೆಚ್ಚಿಸಲು ನಿಧಾನ ಕಲಿಕಾ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ಎರಡು ದಿವಸಗಳ ವಿಶೇಷ ಕಾರ್ಯಾಗಾರವನ್ನು ವಿಷಯವಾರು ಪರಿಣಿತ ರಾದ ಅಶ್ರಫ್ ಮಂಗಳೂರು, ಶರೀಫ್ ನಾರಾವಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿ ತರಬೇತಿ ನೀಡಿದರು
ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ರವರು ವಹಿಸಿದರು. ಉಪಾಧ್ಯಕ್ಷರಾದ ಕೆ. ಎಂ ಮುಸ್ತಾಫ ಸುಳ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮೀಫ್ ಕೊಡಗು ಘಟಕದ ಅಧ್ಯಕ್ಷರಾದ ಕೆ. ಎ ಶಾದಲಿ ಸ್ವಾಗತಿಸಿದರು.
ವೇದಿಕೆಯಲ್ಲಿ ಮೀಫ್ ಸದಸ್ಯರಾದ ಪರ್ವೆಝ್ ಅಲಿ, ಶೇಖ್ ರಹ್ಮತುಲ್ಲಾಹ್, ಮೊಹಮ್ಮದ್ ಶಹಾಮ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುಹಮ್ಮದ್ ಶಾರಿಕ್
ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಣ ಇಲಾಖೆಯ ಜಿಲ್ಲಾ ತರಬೇತುದಾರರಾದ, ಅಶ್ರಫ್ ಮಂಗಳೂರು ಮತ್ತು ಸಯ್ಯದ್ ಶರೀಫ್ ನಾರಾವಿ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
ನಾಪೋಕ್ಲು, ವಿದ್ಯಾ ಸಂಸ್ಥೆಗಳ ಸುಮಾರು 165 ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿರುವುದು. ಕಾರ್ಯಕ್ರಮದ ಪ್ರಯೋಜಕತ್ವವನ್ನು ರಫಲ್ಸ್ ಶಿಕ್ಷಣ ಸಂಸ್ಥೆ ಹೂದವಾಡ ವಹಿಸಿತ್ತು.
ವೇದಿಕೆಯಲ್ಲಿ ಹೊದ್ದುರು ಗ್ರಾಮ ಪಂಚಾಯತ್ ಅಧ್ಯಕ್ಷ ಎಚ್. ಎ. ಹಂಝ, ಕೊಡಗು ಜಿಲ್ಲಾ ವಖ್ಫ್ ಮಾಜಿ ಅಧ್ಯಕ್ಷ ಯಾಕೂಬ್, ಗ್ರಾಮ ಪಂಚಾಯತ್ ಸದಸ್ಯ ಮೊಯ್ದು, ಮೀಫ್ ದ. ಕ. ಮತ್ತು ಉಡುಪಿ ಜಿಲ್ಲೆಗಳ ಪದಾಧಿಕಾರಿಗಳಾದ ಶಹಾಂ ಮೂಡಬಿದ್ರಿ, ರಹ್ಮತುಲ್ಲ ಬುರುಜ್, ಮೀಫ್ ಕೊಡಗು ಜಿಲ್ಲಾ ಘಟಕ ಪದಾಧಿಕಾರಿಗಳಾದ ಮಹಬೂಬ್ ಮಾಸ್ತರ್, ಹನೀಫ್ ಮಡಿಕೇರಿ, ಬಶೀರ್ ಕೆ. ಟಿ., ಮಣಿ ಮಾಸ್ಟರ್ ಸಿದ್ದಾಪುರ,ಅಸ್ಮಾ ಮೌಂಟನ್ ವ್ಯೂ, ವಿರಾಜಪೇಟೆ, ಮೀಫ್ ಸಲಹಾ ಸಮಿತಿ ಸಲೀಂ ನಾಪೋಕ್ಲು, ಮಹಮ್ಮದ್ ಕೊಟ್ಟಮುಡಿ,ಮೀಫ್ ಕೊಡಗು ಜಿಲ್ಲಾಧ್ಯಕ್ಷ ಕೆ. ಎಂ. ಶಾದಲಿ ರೆಫಲ್ಸ್ ಸ್ವಾಗತಿಸಿ, ಪರ್ವೀಜ್ ಅಲಿ ವಂದಿಸಿದರು, ಶಾರಿಕ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *