ಶಾಲೆಯಿಂದ ಮನೆಗೆ ಹಿಂತಿರುಗುವ ಸಮಯದಲ್ಲಿ ಶಾಲಾ ಬಸ್ಸಿನ ಸೀಟಿಗಾಗಿ ಇಬ್ಬರು 9ನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಜಗಳ ನಡೆದಿದೆ. ಸಣ್ಣ ಮಾತಿನಿಂದ ಶುರುವಾದ ವಾಗ್ವಾದ ತಾರಕಕ್ಕೇರಿ, ಕಡೆಗೆ ದುರಂತ ಅಂತ್ಯದಲ್ಲಿ ಕೊನೆಗೊಂಡಿರುವುದು ಸದ್ಯ ಪೋಷಕರಲ್ಲಿ ಕಣ್ಣೀರಿಡುವಂತೆ ಮಾಡಿದೆ.
14 ವರ್ಷದ ಬಾಲಕ ತನ್ನ ಸಹಪಾಠಿಯೊಂದಿಗೆ ಸೀಟಿಗಾಗಿ ಜಗಳವಾಡಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.
9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಸರವಣನ್ ಮತ್ತು ಕಂದಗುರು ನಡುವೆ ಶಾಲಾ ಬಸ್ನ ಸೀಟಿನ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ. ವಾಗ್ವಾದ ತೀವ್ರಗೊಂಡಿದ್ದೇ ತಡ ಸರವಣನ್, ಕಂದಗುರುನನ್ನು ಕೋಪದಲ್ಲಿ ತಳ್ಳಿದ್ದಾನೆ. ತಕ್ಷಣವೇ ಆಯಾತಪ್ಪಿ ಕಳೆಗೆ ಬಿದ್ದ ಕಂದಗುರು ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದೆ. ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದೇ ಆದರೂ ಪ್ರಾಣಪಾಯದಿಂದ ಪಾರುಗಲು ಸಾಧ್ಯವಾಗಿಲ್ಲ.
ಬಾಲಕ ಮೃತಪಟ್ಟ ಬೆನ್ನಲ್ಲೇ ಸೇಲಂ ಪೊಲೀಸರು ವಿದ್ಯಾರ್ಥಿ ಸರವಣನ್ನನ್ನು ವಶಕ್ಕೆ ಪಡೆದಿದ್ದಾರೆ. ಮುಂದಿನ ಕಾನೂನು ಕ್ರಮಗಳಿಗಾಗಿ ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ,(


